ಓದಿಕೋ ಎಂದು ತಾಯಿ ಬುದ್ಧಿ ಹೇಳಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪುತ್ರ – vishwanews24
ಓದಿಕೋ ಎಂದು ತಾಯಿ ಬುದ್ಧಿ ಹೇಳಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪುತ್ರ
ಬೆಳಗಾವಿ: ಓದಿಕೋ ಎಂದು ತಾಯಿ ಬುದ್ಧಿ ಹೇಳಿದಕ್ಕೆ ಮನನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ದೇಶಪಾಂಡೆ ಫ್ಲ್ಯಾಟ್ನಲ್ಲಿ ನಡೆದಿದೆ.
ಸಮರ್ಥ ಸುರೇಶ ಭಜಂತ್ರಿ (14) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ದೀಪಾವಳಿ ರಜೆ ಇದೆ ಅಂತ ತಿರುಗಬೇಡ, ಓದಿಕೋ ಎಂದು ತಾಯಿ ಬುದ್ಧಿ ಹೇಳಿದ್ದರು.
ತಾಯಿಯ ಈ ಮಾತಿಗೆ ಮನನೊಂದು ತಮ್ಮ ಮನೆಯ ಬೆಡ್ರೂಂನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಮರ್ಥ ಮೂಡಲಗಿ ಪಟ್ಟಣದ ಖಾಸಗಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ. ಈ ಸಂಬಂಧ ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
