ಕಂಚಿನಡ್ಕ ಟೋಲ್ ನಿರ್ಮಾಣಕ್ಕೆ ತಾತ್ಕಾಲಿಕ ತಡೆ ನೀಡಿದ ಲೋಕಪಯೋಗಿ ಸಚಿವ :vishwanews24

Featured, ಉಡುಪಿ

ಕಂಚಿನಡ್ಕ ಟೋಲ್ ಗೆ ತಾತ್ಕಾಲಿಕ ತಡೆ ನೀಡಿದ ಲೋಕಪಯೋಗಿ ಇಲಾಖೆ :

ಸಚಿವ ಜಾರಕಿಹೊಳಿ ಅವರಿಂದ ಅಧಿಕೃತ ಆದೇಶ

ಪಡುಬಿದ್ರಿ : ಪಡುಬಿದ್ರಿ: ಪಡುಬಿದ್ರಿ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆಆರ್‌ಡಿಸಿಎಲ್) ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ 1ರ ಪಡುಬಿದ್ರಿ ಬಳಿಯ ಕಂಚಿನಡ್ಕ ಪ್ರದೇಶದಲ್ಲಿ ಸ್ಥಾಪಿಸಲು ದ್ದೇಶಿಸಿರುವ ಟೋಲ್ ಗೇಟ್ ರದ್ದತಿಗೆ ಆಗ್ರಹಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಹಮ್ಮಿಕೊಂಡಿತ್ತು ತದನಂತರ ಕಾಂಗ್ರೆಸ್ ಪಕ್ಷದ ನಿಯೋಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಟೋಲ್ ರದ್ದತಿಯ ವಿಚಾರದಲ್ಲಿ ಮನವರಿಕೆ ಮಾಡಿದ್ದರು. ಇಂದು ಮಧ್ಯಾಹ್ನ ಸಚಿವ ಸತೀಶ್ ಜಾರಕಿಹೊಳಿ ಅವರ ಕಚೇರಿಯಿಂದ ಅಧಿಕೃತ ಆದೇಶ ಪ್ರತಿ ಹೊರ ಬಿದ್ದಿದ್ದು ಪಡುಬಿದ್ರಿ ಕಂಚಿನಡ್ಕದ ಭಾಗದಲ್ಲಿ ನಿರ್ಮಾಣವಾಗುವ ಟೋಲ್ ಗೇಟ್ ಗೆ ತಾತ್ಕಾಲಿಕ ತಡೆಯನ್ನು ನೀಡಲಾಗಿದ್ದು ಮುಂದಿನ ದಿನದಲ್ಲಿ ಚರ್ಚಿಸಿ ರದ್ದು ಮಾಡುವುದರ ಬಗ್ಗೆ ಉಲ್ಲೇಖಿಸಲಾಗಿದೆ

Leave a Reply