ಕಂಚಿನಡ್ಕ ಟೋಲ್ ವಿರುದ್ಧ ರೋಡಿಗಿಳಿಯಲಿದ್ದಾರೆ ಇಂದು ವಿನಯ್ ಕುಮಾರ್ ಸೊರಕೆ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು : vishwanews24

Featured, ಉಡುಪಿ

ಕಂಚಿನಡ್ಕ ಟೋಲ್ ವಿರುದ್ಧ ರೋಡಿಗಿಳಿಯಲಿದ್ದಾರೆ

ಇಂದು ವಿನಯ್ ಕುಮಾರ್ ಸೊರಕೆ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು : vishwanews24

ಪಡುಬಿದ್ರಿ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆಆರ್‌ಡಿಸಿಎಲ್) ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ 1ರ ಪಡುಬಿದ್ರಿ ಬಳಿಯ ಕಂಚಿನಡ್ಕ ಪ್ರದೇಶದಲ್ಲಿ ಸ್ಥಾಪಿಸಲು ದ್ದೇಶಿಸಿರುವ ಟೋಲ್ ಗೇಟ್ ರದ್ದತಿಗೆ ಆಗ್ರಹಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿ ಯಿಂದ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಇಂದು ಕಂಚಿನಡ್ಕ ಪ್ರದೇಶ ದಲ್ಲಿ ಪ್ರತಿಭಟನೆ ನಡೆಯಲಿದೆ.

, ಪಡುಬಿದ್ರಿ ಭಾಗದ ಹೆಜಮಾಡಿ ಯಲ್ಲಿ ಟೋಲ್ ಇರುವಾಗ ಮೂರು ಕಿ. ಮೀ. ಅಂತರದಲ್ಲಿ ಮತ್ತೊಂದು ಟೋಲ್ ಅಳವಡಿಕೆ ಮೂಲಕ ಜನರನ್ನು ಸುಲಿಗೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನು ಖಂಡಿಸಿ ಈ ಹೋರಾಟ ನಡೆಯಲಿದ್ದು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಪ್ರತಿಭಟನೆ ಬಳಿಕ ಆ.22ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ನಾನಾ ಸಚಿವರನ್ನೊಳಗೊಂಡ ನಿಯೋಗದೊಂದಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಳಿ ತೆರಳಿ ಮನವಿ ಸಲ್ಲಿಸಲಿದ್ದು, ಸಾರ್ವಜನಿಕರ ಸಹಿತವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಮತ್ತು ಉತ್ತರ ವಿಭಾಗ, ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲೆಯ ಎಲ್ಲಾ ಬ್ಲಾಕ್‌ಗಳ ಸಹಭಾಗಿತ್ವ ದೊಂದಿಗೆ ಪ್ರತಿಭಟನೆ ನಡೆಯಲಿದೆ.

 

Leave a Reply