ಕಂಬಳ‌ಕೋಣದ ಯಜಮಾನ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಇನ್ನಿಲ್ಲ.

Featured, ಉಡುಪಿ

ಕಂಬಳ‌ಕೋಣದ ಯಜಮಾನ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಇನ್ನಿಲ್ಲ.

ಕಾಪು: ಕಂಬಳದ ಇತಿಹಾಸದಲ್ಲೇ ಭಾರಿ ಹೆಸರು ಪಡದಿರುವ ಕಂಬಳ ಕೋಣಗಳ ಯಜಮಾನ ಕರಿಂಜೆ ವಿನು ವಿಶ್ವನಾಥ್ ಶೆಟ್ಟಿ ಇಂದು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ.

ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ “ವೀರಾ-ವಿಕ್ರಮಾ” ಜೊಡುಕೇರೆ ಕಂಬಳ ಮುಗಿಸಿಕೊಂಡು ಪ್ರಥಮ‌ ಬಹುಮಾನದೊಂದಿಗೆ ವಾಪಸ್ಸು ಆಗುತ್ತಿರುವ ಸಂಧರ್ಭದಲ್ಲಿ ಈ‌ ದುರ್ಘಟನೆ ನಡೆದಿದೆ.

ಕಂಬಳದ ಕೋಣಗಳಿಗೆ ಆಯಾಕಟ್ಟಿನ ವ್ಯವಸ್ಥೆ ಹಾಗೂ ಸ್ವಿಮ್ಮಿಂಗ್ ಫೂಲ್ ನಿರ್ಮಿಸಿ ಭಾರಿ ಹೆಸರು ಪಡೆದಿದ್ದರು.

ಬಡವರಿಗೆ ದಾನಧರ್ಮ ಮಾಡುತ್ತ ಸಮಾಜಮುಖಿಯಾಗಿಯೂ ಸೇವೆ ಗೈದ ಕೀರ್ತಿ ವಿನು ವಿಶ್ವನಾಥ ಶೆಟ್ಟಿಗೆ ಸಲ್ಲುತ್ತೆ.