ಕಟಪಾಡಿಯಲ್ಲಿ ನಡೆಯಿತು ಹೃದಯವಿದ್ರಾವಕ ಘಟನೆ, ಭಾರಿ ನೆರೆಯಿಂದಾಗಿ ಪಾರ್ಥಿವ ಶರೀರವನ್ನ ನೀರಿನಲ್ಲಿ ತೇಲಿಸಿ ತಂದರು.

Featured, ಜಿಲ್ಲೆ

ಕಟಪಾಡಿ: ಕಟಪಾಡಿಯ ಮೂಡಬೆಟ್ಟು ಗ್ರಾಮದ ಕಂಬಲಕಟ್ಟ ಬೀಡುಬದಿಯ ನಿವಾಸಿ ಸೇಸಿ ಪೂಜಾರ್ತಿ ೯೮ ವರ್ಷ ನಿಧನ ಹೊಂದಿದ್ದರು ಅವರ ಅಂತ್ಯಕ್ರೀಯೆಯನ್ನ ಪಲ್ಲಿಗುಡ್ಡೆಯ ಸ್ಮಶಾನದಲ್ಲಿ ನಡೆಸಬೇಕಿದ್ದರಿಂದ ಪಾರ್ಥಿವ ಶರೀರವನ್ನ ಸುಮಾರು ಒಂದಿ ಕಿಲೋಮೀಟರ್ ದೂರದಷ್ಟು ನೀರಿನಲ್ಲಿ ತೇಲಿಸಿಕೊಂಡು ತರಬೇಕಾಯಿತು.

ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ಕಟಪಾಡಿಯ ಅಸುಪಾಸಿನ ಪ್ರದೇಶ ಜಲಾವೃತಗೊಂಡು ಜನ ಸಂಚಾರ ಅಸ್ತವ್ಯಸ್ತವಾಗಿದ್ದ ಪರಿಣಾಮ ಸೂತಕದ ಮನೆಯಿಂದ ರುಧ್ರಭೂಮಿಯವರೆಗೆ ಪಾರ್ಥೀವ ಶರೀರವನ್ನ ಹೊತ್ತುಕೊಂಡು ಬರಲು ಅಸಾಧ್ಯವಾದರಿಂದ ಸ್ಟ್ರಕ್ಚರ್ ಗೆ ವಾಹನದ ಟಯರ್ ನ ಟ್ಯೂಬ್ ಬಳಸಿ ನೀರಿನಲ್ಲಿ ಶವವನ್ನ ನೀರಿನಲ್ಲಿ ತರಲಾಯಿತು.