ಕಟಪಾಡಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರು : ಪ್ರಾಣಪಾಯದಿಂದ ಪಾರಾದ ಕಾರಿನ ಪ್ರಯಾಣಿಕರು -Vishwanews24
ಕಟಪಾಡಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರು : ಪ್ರಾಣಪಾಯದಿಂದ ಪಾರಾದ ಕಾರಿನ ಪ್ರಯಾಣಿಕರು
ಕಾಪು: ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಪೊಸಾರ್ ಬಳಿ
ಟೈಯರ್ ಪಂಚರ್ ಗೊಂಡು ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಟಯರ್ ಪಂಚರ್ ಗೊಂಡಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕಿಂಗ್ ಲೈಟ್ ಉರಿಸದೆ ದುರಸ್ತಿ ಮಾಡುತ್ತಿದ್ದ ಪರಿಣಾಮವಾಗಿ ಉಡುಪಿಯಿಂದ ಪಡುಬಿದ್ರಿ ಕಡೆಗೆ ಸಾಗುತ್ತಿದ್ದ ಕಾರು ಲಾರಿಯ ಹಿಂಬದಿಯಿಂದ ಗುದ್ದಿದ್ದು ಚಾಲಕನ ನಿಯಂತ್ರಣದ ಪರಿಣಾಮವಾಗಿ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ ಕಾರು ಮುಂಭಾಗ ಜಖಂ ಗೊಂಡಿದೆ.
ಸ್ಥಳದಲ್ಲಿ ಕಾಪು ಪೊಲೀಸರು ಸಂಚಾರ ನಿಯಂತ್ರಣ ಮಾಡುತ್ತಿದ್ದಾರೆ.

