ಕಟಪಾಡಿ: ಬೈಕ್ ಮತ್ತು ಟೆಂಪೊ ನಡುವೆ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು – Vishwanews24

Featured, ಉಡುಪಿ

ಕಟಪಾಡಿ: ಬೈಕ್ ಮತ್ತು ಟೆಂಪೊ ನಡುವೆ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು

ಕಟಪಾಡಿ : ಬೈಕ್ ಮತ್ತು ಟೆಂಪೊ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ಕಟಪಾಡಿ ಸುಭಾಷ್ ನಗರ ರೈಲ್ವೇ ಸೇತುವೆ ಬಳಿ ನಡೆದಿದೆ.

ಮೃತ ಬೈಕ್ ಸವಾರರನ್ನು ಶ್ರೀನಿವಾಸ ರಾವ್ (50) ಎಂದು ಗುರುತಿಸಲಾಗಿದೆ.

ಶಂಕರಪುರದಿಂದ ಕಟಪಾಡಿ ಕಡಗೆ ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದ ಶ್ರೀನಿವಾಸ ರಾವ್ ಅವರಿಗೆ ಕಟಪಾಡಿಯಿಂದ ಶಿರ್ವ ಕಡೆಗೆ ಹೋಗುತ್ತಿದ್ದ ಟೆಂಪೊ ಡಿಕ್ಕಿಯಾಗಿದ್ದು ಈ ವೇಳೆ ಗಂಭೀರವಾಗಿ ಗಾಯಗೊಂಡ ಶ್ರೀನಿವಾಸ ರಾವ್ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಶಿರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಉಡುಪಿ: ಕಲ್ಸಂಕ ರಸ್ತೆಯಲ್ಲಿ ಸ್ಕೂಟರ್ ಗೆ ಕಾರು ಢಿಕ್ಕಿ – ಸವಾರ ಸಾವು – Vishwanews24

Leave a Reply