ಕಡಬ: ಹೊಸ ಮನೆಯ ಮೇಲ್ಛಾವಣಿಯಿಂದ ಆಯತಪ್ಪಿ ಬಿದ್ದು ಯುವಕ ಸಾವು – vishwanews24

Featured, ದಕ್ಷಿಣ ಕನ್ನಡ

ಕಡಬ: ಹೊಸ ಮನೆಯ ಮೇಲ್ಛಾವಣಿಯಿಂದ ಆಯತಪ್ಪಿ ಬಿದ್ದು ಯುವಕ ಸಾವು

ಕಡಬ : ಹೊಸ ಮನೆಯ ಮೇಲ್ಛಾವಣಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಆಲಂಕಾರು ಗ್ರಾಮದ ಬಾರ್ಕುಲಿ ನಿವಾಸಿ ಉದಯ ಕುಮಾರ್‌ (27) ಮೃತ ಯುವಕ. ಮಂಗಳವಾರ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನ. 12ರಂದು ಕಾಮಗಾರಿ ನಡೆಯುತ್ತಿದ್ದ ಅವರ ನೂತನ ಮನೆಯ ಮೇಲ್ಛಾವಣಿಗೆ ತೆರಳಿ ಕೆಳಗಿಳಿಯುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಕುತ್ತಿಗೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದು.

ಮಂಗಳೂರು: ದೀಪಕ್ ರಾವ್ ಮತ್ತು ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣ: ವಿಶೇಷ ಕೋರ್ಟ್ ಸ್ಥಾಪಿಸಲು ಪೋಷಕರ ಮನವಿ – vishwanews24

ತತ್‌ಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಬಳಿಕ ಮಂಗಳೂರು ವೆನ್ಲಾಕ್‌ ಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಮಂಗಳವಾರ ಸಂಜೆ ವೇಳೆ ಚಿಕಿತ್ಸೆ ಫ‌ಲಕಾರಿಯಾಗದೆ ನಿಧನ ಹೊಂದಿದರು. ಅವರು ವಿವಿಧ ಸಂಘಟನೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದುಕೊಂಡು ಸಮಾಜಸೇವಕರಾಗಿದ್ದರು. ಓರ್ವ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಮಂಗಳೂರು: ದೀಪಕ್ ರಾವ್ ಮತ್ತು ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣ: ವಿಶೇಷ ಕೋರ್ಟ್ ಸ್ಥಾಪಿಸಲು ಪೋಷಕರ ಮನವಿ – vishwanews24

Leave a Reply