ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್ ಏರಿಕೆ : ಪ್ರವಾಸಿ ತಾಣ, ಹೋಟೆಲ್ , ರೆಸಾರ್ಟ್‌ಗಳು ಭರ್ತಿ – Vishwanews24
ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್ ಏರಿಕೆ , ಪ್ರವಾಸಿ ತಾಣ, ಹೋಟೆಲ್ , ರೆಸಾರ್ಟ್‌ಗಳು ಭರ್ತಿ
ಮಂಗಳೂರು/ಉಡುಪಿ: ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ತೀರ್ಥಕ್ಷೇತ್ರಗಳು, ಕಡಲ ತೀರ ಸಹಿತ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಹೆಚ್ಚಿದೆ.
ಮಂಗಳೂರು, ಉಡುಪಿಯ ಪ್ರಮುಖ ಹೊಟೇಲ್‌ಗಳ ಕೊಠಡಿಗಳು ಜನವರಿ ಮೊದಲ ವಾರದ ವರೆಗೂ ಬುಕ್ ಆಗಿವೆ.ಹೋಂ ಸ್ಟೇಗಳು, ರೆಸಾರ್ಟ್‌ಗಳು, ಸರ್ವಿಸ್ ಅಪಾರ್ಟ್‌ಮೆಂಟ್‌ಗಳೂ ಭರ್ತಿಯಾಗಿವೆ.
ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ, ಕ್ರಿಸ್ಮಸ್ ಆಚರಣೆ ಮೇಲೆ ಒಂದಿಲ್ಲೊಂದು ರೀತಿಯ ನಿಯಂತ್ರಣ ಕ್ರಮಗಳಿದ್ದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಈ ಬಾರಿ ಮುಖ್ಯವಾಗಿ ವರ್ಷಾಂತ್ಯಕ್ಕೆ ಊರಿಗೆ ಮರಳಿರುವ ಅನಿವಾಸಿ ಭಾರತೀಯರು, ಕ್ರಿಸ್ಮಸ್ ರಜೆಗೆ ಸುತ್ತಾಟಕ್ಕೆ ಆಗಮಿಸಿರುವಂತಹ ಕುಟುಂಬಗಳಿಂದಾಗಿ ಜನಸಂದಣಿ ಹೆಚ್ಚಿದೆ ಎನ್ನುತ್ತಾರೆ ಹೊಟೇಲ್‌ನವರು.
ದ.ಕ.ದಲ್ಲಿ 80 ನೋಂದಾಯಿತ ಹೋಂಸ್ಟೇಗಳು ಇವೆ. ಹೆಚ್ಚಿನವು ಮಂಗಳೂರು ತಾಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ಉಳ್ಳಾಲ, ಸುರತ್ಕಲ್ ಕಡಲ ಕಿನಾರೆ ಬಳಿ ಇವೆ. ಉಡುಪಿ ಜಿಲ್ಲೆಯ ಮಲ್ಪೆ, ಕಾಪು, ಕುಂದಾಪುರ ಕಡಲ ಕಿನಾರೆ ಪರಿಸರದಲ್ಲಿರುವ ಹೋಂ ಸ್ಟೇ, ಹಟ್ ಹೋಂಗಳು ಭರ್ತಿಯಾಗಿವೆ.
ಮಂಗಳೂರು ನಗರದಲ್ಲಿರುವ ಸ್ಟಾರ್ ಹೊಟೇಲ್‌ಗಳಲ್ಲಿ ಸುಮಾರು 400 ಕೊಠಡಿಗಳು ಪೂರ್ತಿ ತುಂಬಿ ದ್ದರೆ ಅದಕ್ಕಿಂತ ಕೆಳ ಮಟ್ಟದ ಹೊಟೇಲ್‌ಗಳಲ್ಲಿರುವ 2 ಸಾವಿರದಷ್ಟು ಕೊಠಡಿಗಳೂ ಭರ್ತಿಯಾಗಿವೆ. 30ಕ್ಕೂ ಹೆಚ್ಚು ಸರ್ವಿಸ್ ಅಪಾರ್ಟ್‌ಮೆಂಟ್‌ಗಳೂ ಬುಕ್ ಆಗಿವೆ. ಮುಖ್ಯವಾಗಿ ಬೆಂಗಳೂರು ಭಾಗದಿಂದ ಹೆಚ್ಚು ಜನರು ಆಗಮಿಸಿದ್ದಾರೆ.
ಮಂಗಳೂರು ನಗರದಲ್ಲಿರುವ ವಿವಿಧ ಶಾಪಿಂಗ್ ಮಾಲ್‌ಗಳು, ನಗರದ ಪ್ರಮುಖ ರೆಸ್ಟೋರೆಂಟ್, ಐಸ್‌ಕ್ರೀಂ ಪಾರ್ಲರುಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಕ್ರಿಸ್ಮಸ್ ಶಾಪಿಂಗ್ ಕೂಡ ಹೆಚ್ಚಾಗಿದೆ. ಮೂಡು ಬಿದಿರೆಯ ಸಾಂಸ್ಕೃತಿಕ ಜಾಂಬೂರಿ ನೋಡಲು ಬರುವವರ ಸಂಖ್ಯೆಯೂ ಅಧಿಕವಾಗಿದೆ. ಅಲ್ಲಿಗೆ ಬರುವವರು ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೂ ಹೋಗುವ ಯೋಜನೆ ಹಾಕಿಕೊಂಡೇ ಬರುತ್ತಾರೆ.
ಶಿರ್ವ: ಟೆಂಪೋ ಟ್ರಾವೆಲರ್ ಮತ್ತು ಕಾರಿನ ನಡುವೆ ಅಫಘಾತ : ಇಬ್ಬರಿಗೆ ಗಾಯ – Vishwanews24
