ಕರಾವಳಿಯಲ್ಲಿ ಭಾರಿ ಗಾಳಿ, ಮಳೆ ಮುನ್ಸೂಚನೆ: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ  – vishwanews24 https://wp.me/p9KQap-ogG

Featured, ಉಡುಪಿ, ದಕ್ಷಿಣ ಕನ್ನಡ

ಕರಾವಳಿಯಲ್ಲಿ ಭಾರಿ ಗಾಳಿ, ಮಳೆ ಮುನ್ಸೂಚನೆ: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ 

ಉಡುಪಿ,: ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಕರ್ನಾಟಕ ಕರಾವಳಿ ತೀರದಲ್ಲಿ ಭಾರೀ ವೇಗದ ಗಾಳಿ-ಮಳೆ ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ಜೂ.8ರಿಂದ 11ರವರೆಗೆ ಕರಾವಳಿಯಲ್ಲಿ ಗಂಟೆಗೆ 35ರಿಂದ 45ಕಿ.ಮೀ. ವೇಗದ ಒಮ್ಮೊಮ್ಮೆ 55ರಿಂದ 65ಕಿ.ಮೀ. ವೇಗ ಪಡೆಯುವ ಗಾಳಿ ಕರ್ನಾಟಕ ಕರಾವಳಿ ತೀರದುದ್ದಕ್ಕೂ ಬೀಸುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಕರಾವಳಿಯ ಮೀನುಗಾರರು ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

ಉಡುಪಿ: ರಸ್ತೆಬದಿಗೆ ಉರುಳಿಬಿದ್ದ ಖಾದ್ಯ ತೈಲದ ಟ್ಯಾಂಕರ್ > ಚಾಲಕ ಅಪಾಯದಿಂದ ಪಾರು – vishwanews24

ಈ ಅವಧಿಯಲ್ಲಿ ರಾಜ್ಯ ಕರಾವಳಿಯ ಜಿಲ್ಲೆಗಳ ಕೆಲವು ಪ್ರದೇಶಗಳ್ಲಿ 64.5ಮಿ.ಮೀ.ನಿಂದ 115.6ಮಿ.ಮೀ.ವರೆಗೆ ಹಾಗೂ ಇನ್ನು ಕೆಲವು ಪ್ರದೇಶಗಳಲ್ಲಿ 115.6ಮಿ.ಮೀ.ನಿಂದ 204.4 ಮಿ.ಮೀ.ವರೆಗೂ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.

ಇದೇ ರೀತಿಯ ಎಚ್ಚರಿಕೆಯನ್ನು ಕೇರಳ, ಲಕ್ಷದ್ವೀಪ ಹಾಗೂ ದಕ್ಷಿಣ ತಮಿಳುನಾಡಿನ ಕರಾವಳಿ ತೀರದ ಮೀನುಗಾರರಿಗೂ ನೀಡಲಾಗಿದೆ.

ಕಾಪು : ಯುವಕ ನಾಪತ್ತೆ ಪ್ರಕರಣ : ಪಡುಕರೆ ಸಮುದ್ರದಲ್ಲಿ ಮೃತದೇಹ ಪತ್ತೆ – vishwanews24

Leave a Reply