ಕರಾವಳಿಯ ಪ್ರಸಿದ್ಧ ಮೂಲ್ಕಿ ಬಪ್ಪನಾಡು ದುರ್ಗೆಗೆ 5 ಕೋಟಿಯ ಸ್ವರ್ಣ ಪಲ್ಲಕ್ಕಿ -Vishwanews24

Featured, ಉಡುಪಿ

ಉಡುಪಿ: ಕರಾವಳಿಯ ಪ್ರಸಿದ್ಧ ದೇವಿಯ ದೇಗುಲ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಉಡುಪಿಯಲ್ಲಿ ಚಿನ್ನದ ಪಲ್ಲಕ್ಕಿ ಸಿದ್ಧಗೊಂಡಿದೆ.

ಈ ಪಲ್ಲಕ್ಕಿ ತಯಾರಿಗೆ 12 ಕಿಲೋ ತೂಕದ ಚಿನ್ನ ಬಳಸಲಾಗಿದೆ. ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಈ ಕಲಾತ್ಮಕ ಪಲ್ಲಕಿ ಸಿದ್ಧಗೊಳಿಸಲಾಗಿದೆ. ದೇವಾಲಯಗಳ ಆಭರಣ, ರಥ ಹಾಗೂ ಪಲ್ಲಕಿ ನಿರ್ಮಾಣಕ್ಕೆ ಹೆಸರುವಾಸಿಯಾದ ಉಡುಪಿಯ ಸ್ವರ್ಣ ಜುವೆಲ್ಲರ್ಸ್ ಒಂದು ತಿಂಗಳ ಕಾಲಾವಧಿಯಲ್ಲಿ ಪಲ್ಲಕ್ಕಿಯನ್ನು ನಿರ್ಮಾಣ ಮಾಡಿದೆ.

 

ಉಡುಪಿಯಲ್ಲಿ ಸಿದ್ಧಗೊಂಡ ಸ್ವರ್ಣ ಪಲ್ಲಕ್ಕಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗಿದೆ. ಸುಮಾರು 5 ಕೋಟಿ ರೂ. ವೆಚ್ಚದ ಈ ಸ್ವರ್ಣ ಪಲ್ಲಕ್ಕಿಯ ಗುಣಮಟ್ಟ, ಚಿನ್ನದ ಪರಿಶುದ್ಧತೆ, ತೂಕ ಸಹಿತ ವಿವಿಧೆಡೆ ಕೆಲಸ ಕಾರ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಬಪ್ಪನಾಡಿನ ಭಕ್ತರ ಸಹಕಾರದೊಂದಿಗೆ ರೂಪಿತವಾಗಿರುವ ಈ ಸ್ವರ್ಣ ಪಲ್ಲಕ್ಕಿಯನ್ನು ಕಳೆದ 2 ತಿಂಗಳೊಳಗೆ ಪೂರ್ಣಗೊಳಿಸಲಾಗಿದೆ‌ ಎಂದು ಸ್ವರ್ಣ ಸಂಸ್ಥೆಯ ನಿರ್ದೇಶಕ ಗುಜ್ಜಾಡಿ ರಾಮದಾಸ್ ನಾಯಕ್ ತಿಳಿಸಿದ್ದಾರೆ.