ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳನ್ನು ನಿಷೇಧಿಸಿ  ಬಳಿಕ ಉಚಿತ ಪ್ರಯಾಣ ಕೇಳಿ : ಶಾಸಕ ಸುನೀಲ್ ಗೆ ನವೀನ್ ಸಾಲಿಯಾನ್ ತಿರುಗೇಟು – Vishwanews24

Featured, ಉಡುಪಿ

ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳನ್ನು ನಿಷೇಧಿಸಿ  ಬಳಿಕ ಉಚಿತ ಪ್ರಯಾಣ ಕೇಳಿ : ಶಾಸಕ ಸುನೀಲ್ ಗೆ ನವೀನ್ ಸಾಲಿಯಾನ್ ತಿರುಗೇಟು

ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳಲ್ಲಿ ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವುಂತೆ ಆಗ್ರಹಿಸಿರುವು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮೊದಲು ಅವರ ಪಕ್ಷದ ಬಿಜೆಪಿ ನಾಯಕರ ಹಿಡಿತದಲ್ಲಿರುವ ಖಾಸಗಿ ಬಸ್ಸುಗಳನ್ನು ನಿಷೇಧಿಸಿ ಸರಕಾರಿ ಬಸ್ಸುಗಳನ್ನು ಕರಾವಳಿ ಜಿಲ್ಲೆಗಳಲ್ಲಿ ಓಡಿಸುವಂತೆ ಆಗ್ರಹಿಸಲಿ ಎಂದು ಉಡುಪಿ ಜಿಲ್ಲಾ ಮೀನುಗಾರ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಸಾಲಿಯಾನ್ ಹೇಳಿದ್ದಾರೆ.

ಅಂದು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹಲವಾರು ಸರಕಾರಿ ನರ್ಮ್ ಬಸ್ಸುಗಳನ್ನು ಗ್ರಾಮಾಂತರ ಪ್ರದೇಶಕ್ಕೆ ಒಡಿಸಿದಾಗ ಬಿಜೆಪಿ ನಾಯಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅವಗಳನ್ನು ಮೂಲೆಗುಂಪು ಮಾಡಿ ಮತ್ತೆ ಖಾಸಗಿ ಬಸ್ಸುಗಳಿಗೆ ಅವಕಾಶ ಮಾಡಿಕೊಟ್ಟಿದ್ದನ್ನು ಸುನೀಲ್ ಕುಮಾರ್ ಅವರು ಮರೆತಿದ್ದಾರೆ. ಬಿಜೆಪಿ ನಾಯಕರ ಖಾಸಗಿ ಲಾಬಿಯಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಸರಕಾರಿ ಬಸ್ಸಗಳನ್ನು ಒಡಿಸಲು ಬಿಡುತ್ತಿಲ್ಲ ಎನ್ನುವುದು ತಿಳಿದಿರುವ ಸುನೀಲ್ ಕುಮಾರ್ ಮೊದಲು ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳಿಗೆ ಅವಕಾಶ ಮಾಡಿಕೊಡಲಿ ಬಳಿಕ ಉಚಿತ ಪ್ರಯಾಣವನ್ನು ಕೇಳುವ ಧೈರ್ಯ ಮಾಡಬೇಕು.

ದಕ್ಷಿಣಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಎನ್ಐಎ ದಾಳಿ… Vishwanews24

ಕಾಂಗ್ರೆಸ್ ಸರಕಾರ ಎಲ್ಲಾ ವರ್ಗದ ಜನರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಉಚಿತ ಬಸ್ ಪ್ರಯಾಣವನ್ನು ಮಹಿಳೆಯರಿಗೆ ನೀಡಿದ್ದು ಅದರ ಪ್ರಯೋಜನ ಕರಾವಳಿಯಲ್ಲಿ ಸಂಚರಿಸುವ ಸರಕಾರಿ ಬಸ್ಸುಗಳಲ್ಲಿ ಲಭ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇನ್ನೂ ಅದರ ಲಾಭ ಪಡೆಯಬೇಕಾಗಿದ್ದಲ್ಲಿ ಸುನೀಲ್ ಕುಮಾರ್ ಸಹಿತ ಕರಾವಳಿಯ ಎಲ್ಲಾ ಬಿಜೆಪಿ ಶಾಸಕರು ಖಾಸಗಿ ಬಸ್ಸುಗಳನ್ನು ನಿಲ್ಲಿಸಿ ಸರಕಾರಿ ಬಸ್ಸುಗಳನ್ನು ಒಡಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲಿ. ಅದನ್ನು ಬಿಟ್ಟು ಕೇವಲ ಬಾಯಿ ಚಪಲಕ್ಕೆ ಎಂಬಂತೆ ಹೇಳಿಕೆ ಕೊಡುವುದನ್ನು ಬಿಟ್ಟು ಜನರ ಒಳಿತಿಗಾಗಿ ಶ್ರಮಿಸಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ : ಯುವತಿ ನಾಪತ್ತೆ – Vishwanews24

Leave a Reply