ಕರೋನಾ ಸಾವುಗಳೆಲ್ಲವೂ ಬಿಜೆಪಿ ಪ್ರಾಯೋಜಿತ ಮಾರಣಹೋಮ : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ -Vishwanews24

Featured, ರಾಜ್ಯ ನ್ಯೂಸ್

ಕರೋನಾ ಸಾವುಗಳೆಲ್ಲವೂ ಬಿಜೆಪಿ ಪ್ರಾಯೋಜಿತ ಮಾರಣಹೋಮ : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ -Vishwanews24

ಬೆಂಗಳೂರು : ಕರೋನಾ ಸಾವುಗಳೆಲ್ಲವೂ ಬಿಜೆಪಿ ಪ್ರಾಯೋಜಿತ ಮಾರಣಹೋಮ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಕೊರೊನಾ ಬಂದು ವರ್ಷವಾದರೂ ಸೂಕ್ತ ವೈದ್ಯಕೀಯ ವ್ಯವಸ್ಥೆಗಳನ್ನು ರೂಪಿಸದೇ, ಆಂತರಿಕ ಕಚ್ಚಾಟ, ಖಾತೆ ಕಿತ್ತಾಟ, ಸಿಡಿ ಚೆಲ್ಲಾಟ, ವರ್ಗಾವಣೆ ದಂಧೆ, ಭ್ರಷ್ಟಾಚಾರದಲ್ಲಿ ಮುಳುಗಿದ ಈ ಸೋಂಕಿತ ಸರ್ಕಾರದ ನಿರ್ಲಕ್ಷ್ಯ, ಬೇಜಾಬ್ದಾರಿಗಳ, ಭ್ರಷ್ಟಾಚಾರಿಗಳೇ ಇಂದಿನ ಭೀಕರ ಸ್ಥಿತಿಗೆ ಕಾರಣ ಎಂದು ವಾಗ್ದಾಳಿ ನಡೆಸಿದೆ.

ರಾಜ್ಯ ಸರ್ಕಾರ ಅಘೋಷಿತ ಲಾಕ್ ಡೌನ್ ಜಾರಿಗೊಳಿಸಿದೆ. ಬಡವರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲಾ ಅರ್ಹರಿಗೆ ಕೂಡಲೇ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು. ಈಗಾಗಲೇ ತೀವ್ರ ಸಂಕಷ್ಟದಲ್ಲಿರುವ ಸಣ್ಣ & ಮಧ್ಯಮ ಉದ್ಯಮ, ಕೈಗಾರಿಕೆಗಳ ನೆರವಿಗೆ ಅಗತ್ಯ ಕ್ರಮ ಕೈಗೊಂಡು ಉದ್ಯೋಗ ಹಾಗೂ ಆರ್ಥಿಕ ನಷ್ಟವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದೆ.

ಧರ್ಮಸ್ಥಳ: ಶ್ರೀ ಕ್ಷೇತ್ರದಲ್ಲಿ ಏ.29ರಂದು ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮ ರದ್ದು -Vishwanews24