ಕರ್ತವ್ಯದ ವೇಳೆ ಮಂಗಳೂರು ಸಿಸಿಬಿ ಪೊಲೀಸರ ಎಣ್ಣೆಪಾರ್ಟಿ ! ತನಿಖೆಗೆ ಕಮಿಷನರ್ ಶಶಿಕುಮಾರ್ ಆದೇಶ -Vishwanews24

Featured, ದಕ್ಷಿಣ ಕನ್ನಡ

ಕರ್ತವ್ಯದ ವೇಳೆಯಲ್ಲೇ ಮಂಗಳೂರು ಸಿಸಿಬಿ ಪೊಲೀಸರ ಎಣ್ಣೆಪಾರ್ಟಿ ! ತನಿಖೆಗೆ ಕಮಿಷನರ್ ಶಶಿಕುಮಾರ್ ಆದೇಶ -Vishwanews24

ಮಂಗಳೂರು: ಕರ್ತವ್ಯದ ಸಮಯದಲ್ಲಿ ಬಾರಿನಲ್ಲಿ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಯೋರ್ವನೊಂದಿಗೆ ಮಂಗಳೂರು ಸಿಸಿಬಿ ಪೊಲೀಸರು ಎಣ್ಣೆ ಪಾರ್ಟಿ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮದ್ಯಪಾನ ಪಾರ್ಟಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಂಗಳೂರು ಕಮಿಷನರ್ ಶಶಿಕುಮಾರ್ ತನಿಖೆಗೆ ಆದೇಶಿಸಿದ್ದಾರೆ.

ಮಂಗಳೂರು ಸಿಸಿಬಿ ವಿಭಾಗದ ಎಂಟು ಮಂದಿ ಪೊಲೀಸರು ಮಂಗಳೂರು ಹೊರವಲಯದ ಕುತ್ತಾರು ಬಳಿಯ ಬಾರ್ ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಬಾರ್ ಹೊರಗೆ ಸರಕಾರಿ ಟಿ.ಟಿ ವಾಹನ ನಿಲ್ಲಿಸಿ ಪಾರ್ಟಿ ನಡೆಸುತ್ತಿದ್ದರು ಎನ್ನಲಾಗಿದೆ.

ಇದಲ್ಲದೆ, ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯ ಜೊತೆ ಎಂಟು ಮಂದಿ ಸಿಸಿಬಿ ಪೊಲೀಸರು ಬಾರಿನಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ವೈರಲ್ ವಿಡಿಯೋದ ಬಗ್ಗೆ ತನಿಖೆ ನಡೆಸಲು ನಗರ ಆಯುಕ್ತರು ಆದೇಶಿಸಿದ್ದು, ಮಂಗಳೂರು ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.