ಕರ್ನಾಟಕಕ್ಕೆ ವಕ್ಕರಿಸಿದ ಒಮಿಕ್ರಾನ್ : ಬೆಂಗಳೂರಿನಲ್ಲಿ ಎರಡು ಹೊಸ ರೂಪಾಂತರಿ ವೈರಸ್ ಪತ್ತೆ !!

Featured, ರಾಷ್ಟ್ರ ನ್ಯೂಸ್

ಭಾರತಕ್ಕೂ ಕಾಲಿಟ್ಟ ಓಮಿಕ್ರಾನ್: ಕರ್ನಾಟಕದಲ್ಲಿ ಎರಡು ಹೊಸ ರೂಪಾಂತರಿ ಪತ್ತೆ!
ಮುಂಬಯಿ: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಓಮಿಕ್ರಾನ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅದರಲ್ಲೂ ಕರ್ನಾಟಕದಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ.

ಕರ್ನಾಟಕದ ಇಬ್ಬರಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
66 ವರ್ಷದ ವೃದ್ಧ ಹಾಗೂ 46 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಇಬ್ಬರು ಆಫ್ರಿಕಾದಿಂದ ಮರಳಿದ್ದವರಾಗಿದ್ದಾರೆ.

ಕರ್ನಾಟಕದಲ್ಲಿ ಪತ್ತೆಯಾಗಿರುವ ಎರಡು ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗಿದೆ.