ಕರ್ನಾಟಕದಲ್ಲಿ ಪ್ರಜಾಪ್ರಭುತ್ವದಲ್ಲಿನ ಪ್ರಾಮಾಣಿಕ ಹೋರಾಟಕ್ಕೆ ಸೋಲಾಗಿದೆ : ರಾಹುಲ್ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಕರ್ನಾಟಕದಲ್ಲಿ ಪ್ರಜಾಪ್ರಭುತ್ವದಲ್ಲಿನ ಪ್ರಾಮಾಣಿಕ ಹೋರಾಟಕ್ಕೆ ಸೋಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸ ಮತ ಗಳಿಸಲು ಹರ ಸಾಹಸಪಟ್ಟ ಮೈತ್ರಿ ಸರ್ಕಾರ, ವಿಶ್ವಾಸಮತ ಸಾಬೀತು ಪಡಿಸುವಲ್ಲಿ ವಿಫಲವಾದರು. ಹೀಗಾಗಿ ಬಿಜೆಪಿ, ಸರ್ಕಾರ ರಚನೆ ಮಾಡಲು ಎಲ್ಲಾ ರೀತಿಯಾಗಿ ತಯಾರಾಗಿತ್ತು.

ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭವಾದ ದಿನದಿಂದಲೂ  ಸರ್ಕಾರಕ್ಕೆ ಪಟ್ಟಭದ್ರ ಹಿತಾಸಕ್ತಿಗಳ ಬೆದರಿಕೆ ಇತ್ತು. ಅದರ ನಂತರವೂ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ತನ್ನ ಅಭಿವೃದ್ಧಿ ಪಥದಲ್ಲಿರುವ ಅಡಚಣೆಗಳನ್ನು ಬೆದರಿಕೆಗಳನ್ನು ಎದುರಿಸಿಕೊಂಡು ಸಾಗುತ್ತಿತ್ತು. ಆದರೆ ಕೊನೆಗೂ ಬಿಜೆಪಿಯ ದುರಾಸೆ ಗೆದ್ದಿದ್ದು, ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಮತ್ತು ಕರ್ನಾಟಕದ ಜನತೆಗೆ ಸೋಲಾಗಿದೆ” ಎಂದು ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ಮೈತ್ರಿ ಸರ್ಕಾರದ ಶಾಸಕರಿಗೆ ಬಿಜೆಪಿ ಹಣದ ಆಸೆ ತೋರಿಸಿ, ಅವರನ್ನು ಬೆದರಿಸಿ ರಾಜೀನಾಮೆ ಕೊಡಿಸಿದೆ ಎಂಬ ಆರೋಪ ಮಾಡಿದೆ.

ಬಿಜೆಪಿಯನ್ನು ಅಧಿಕಾರದಿಂದ ಹೊರಗೆ ಇಡಲೇಬೇಕು ಎಂದು ಪಣತೊಟ್ಟಿದ್ದ ಕಾಂಗ್ರೆಸ್​ ಈ ಮೈತ್ರಿಗೆ ಸಮ್ಮತಿ ನೀಡಿತ್ತು. ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಅಂದು ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್​ ಗಾಂಧಿ ಕೂಡ ಪ್ರಮುಖಪಾತ್ರ ವಹಿಸಿದ್ದರು.