ಕರ್ನಾಟಕ ರಾಜ್ಯದ ಎಲ್ಲಾ ಸಾರಿಗೆ ಮಾರ್ಗದಲ್ಲಿ ಶೇಕಡಾ 50ರಷ್ಟು ಖಾಸಗಿ ಬಸ್ಸು ಆರಂಭಿಸುವಂತೆ ಕುಯಿಲಾಡಿ ಸುರೇಶ್ ನಾಯಕ್ ಒತ್ತಾಯ.vishwanews24
ಉಡುಪಿ: ರಾಜ್ಯದಲ್ಲಿ ಪದೇಪದೇ ಕೆಎಸ್ಆರ್ಟಿಸಿ ನೌಕರರ ಮುಷ್ಕರ ಹಾಗೂ ಇತರ ಸಮಸ್ಯೆಗಳಿಂದಾಗಿ ಪ್ರಯಾಣಿಕರಿಗೆ ಬಾರಿ ಸಮಸ್ಯೆ ಉಂಟಾಗುತ್ತಿದೆ ಈ ಸಮಸ್ಯೆ ಬಗೆಹರಿಯಬೇಕು ಎಂದಾದರೆ ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ಸರಕಾರ ಕೂಡ ರಾಜ್ಯದ ಎಲ್ಲಾ ಭಾಗದಲ್ಲಿ ಖಾಸಗಿ ಬಸ್ಸುಗಳು ಓಡಾಟಕ್ಕೆ ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಒಕ್ಕೂಟದ ಖಜಾಂಜಿಯಾಗಿ ಕುಯಿಲಾಡಿ ಸುರೇಶ್ ನಾಯಕ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಖಾಸಗಿ ಬಸ್ಸುಗಳ ಓಡಾಟದಿಂದ ಸರಕಾರದ ಬೊಕ್ಕಸಕ್ಕೆ ಲಾಭವಾಗುತ್ತದೆ ಹಾಗೂ ಪದೇಪದೇ ಹೊಸ ಡಿಪೋಗಳ ನಿರ್ಮಾಣ ಮಾಡುವಂಥದ್ದು ಮತ್ತು ಹೊಸ ಬಸ್ ಖರೀದಿ ಮಾಡುವ ಸಮಸ್ಯೆಗಳು ಬಗೆಹರಿದಂತೆ ಆಗುತ್ತದೆ ಅಲ್ಲದೆ ಖಾಸಾಗಿ ಹಾಗೂ ಸರ್ಕಾರಿ ಬಸ್ಸುಗಳ ಒಡಾಡುವುದರಿಂದ ಪ್ರಯಾಣಿಕರಿಗೆ ಕೂಡ ಅನುಕೂಲವಾಗುತ್ತೆ ಎಂದರು.
ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ಹೆಚ್ಚಿನ ಗಮನಹರಿಸಿ ರಾಜ್ಯದ ಎಲ್ಲಾ ಸಾರಿಗೆ ಭಾಗದಲ್ಲಿ ಖಾಸಗಿ ಬಸ್ಸುಗಳಿಗೆ ಶೇಕಡ 50ರಷ್ಟು ಅನುಪಾತದಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
Facebook video link
&https://www.facebook.com/193132874519477/posts/757324604766965/
