ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ – ಕರಾವಳಿಯ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳು – VIshwnaews24
ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ
ಕರಾವಳಿಯ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್..
ಕಾಪು- ಸೊರಕೆ, ಬೈಂದೂರು- ಪೂಜಾರಿ, ಕುಂದಾಪುರ- ದಿನೇಶ್ ಹೆಗ್ಡೆ
ಸುಳ್ಯ- ಕೃಷ್ಣಪ್ಪ ಜಿ, ಬಂಟ್ವಾಳ – ರಮಾನಾಥ ರೈ, ಮೂಡಬಿದರೆ – ಮಿಥುನ್ ರೈ, ಬೆಳ್ತಂಗಡಿ – ರಕ್ಷಿತ್ ಶಿವರಾಂ
ಮಂಗಳೂರು/ಉಡುಪಿ: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 5 ಕ್ಷೇತ್ರಗಳು ಹಾಗೂ ಉಡುಪಿ ಜಿಲ್ಲೆಯ 3 ಕ್ಷೇತ್ರಗಳಿಗೆ ಅಭ್ಯಗರ್ಥಿಗಳು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Congress party announces the first list of 124 candidates for Karnataka Assembly Elections.
Names of former CM Siddaramaiah, and State party president DK Shivakumar are present in the first list. pic.twitter.com/TC9vXJfrX5
— ANI (@ANI) March 25, 2023
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರಕ್ಕೆ ಕೃಷ್ಣಪ್ಪ ಜಿ, ಬಂಟ್ವಾಳ ರಮಾನಾಥ ರೈ, ಮೂಡಬಿದರೆ ಕ್ಷೇತ್ರಕ್ಕೆ ಮಿಥುನ್ ರೈ, ಬೆಳ್ತಂಗಡಿ ಕ್ಷೇತ್ರಕ್ಕೆ ರಕ್ಷಿತ್ ಶಿವರಾಂ ಅವಕಾಶ ಪಡೆದರೆ. ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರಕ್ಕೆ ಗೋಪಾಲ ಪೂಜಾರಿ, ಕುಂದಾಪುರ ಕ್ಷೇತ್ರಕ್ಕೆ ದಿನೇಶ್ ಹೆಗ್ಡೆ ಮೊಳಹಳ್ಳಿ ಮತ್ತು ಕಾಪು ಕ್ಷೇತ್ರಕ್ಕೆ ವಿನಯ್ ಕುಮಾರ್ ಸೊರಕೆಯವರನ್ನು ಪಕ್ಷ ಆಯ್ಕೆ ಮಾಡಿದೆ.
ಇನ್ನುಳಿದಂತೆ ದಕ ಜಿಲ್ಲೆ ಮಂಗಳೂರು ನಗರ, ಪುತ್ತೂರು, ಸುರತ್ಕಲ್ ಕ್ಷೇತ್ರ ಹಾಗೂ ಉಡುಪಿ ಜಿಲ್ಲೆಯ ಉಡುಪಿ ಹಾಗೂ ಕಾರ್ಕಳ ಕ್ಷೇತ್ರಕ್ಕೆ ಇನ್ನಷ್ಟೇ ಅಭ್ಯರ್ಥಿಯ ಆಯ್ಕೆ ನಡೆಯಬೇಕಾಗಿದೆ.
