ಕರ್ನಾಟಕ ಸರಕಾರದಿಂದ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ‘ ವೈ ‘ ಶ್ರೇಣಿ ಭದ್ರತೆ  -Vishwanews24

Featured, ಉಡುಪಿ

ಕರ್ನಾಟಕ ಸರಕಾರದಿಂದ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ‘ ವೈ ‘ ಶ್ರೇಣಿ ಭದ್ರತೆ  -Vishwanews24

ಉಡುಪಿ: ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಕರ್ನಾಟಕ ಸರಕಾರ ವೈ ಶ್ರೇಣಿ ಭದ್ರತೆ ಮಂಜೂರು ಮಾಡಿದ್ದು ಗುರುವಾರದಿಂದಲೇ ಒದಗಿಸಲಾಗಿದೆ .

ಕಾಪು ಕರಂದಾಡಿ ವಾದ್ಯ ಬ್ಯಾಂಡು ನಾಗಸ್ವರದೊಂದಿಗೆ ವಿದ್ಯಾರ್ಥಿಗಳಿಗೆ ಶಾಲೆಗೆ ಸ್ವಾಗತ.

https://bit.ly/34ZsT7W

ರಾಮಮಂದಿರ ನಿರ್ಮಾಣದ ಜನಜಾಗೃತಿ ಅಭಿಯಾನದಲ್ಲಿ ಸದ್ಯ ನಿರತಾಗಿರುವ ಶ್ರೀಗಳು ದೇಶಾದ್ಯಂತ ಸಂಚಾರ ಕೈಗೊಂಡಿದ್ದಾರೆ . ಈ ಹಿನ್ನಲೆಯಲ್ಲಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಉಡುಪಿ ಶಾಸಕ ಕೆ ರಘುಪತಿ ಭಟ್ ಸರಕಾರಕ್ಕೆ ಮನವಿ ಸಲ್ಲಿಸಿದ್ದರು .

ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ , ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ , ಶಾಸಕ ಭಟ್ ಹಾಗೂ ರಾಜ್ಯ ಪೋಲೀಸ್ ಮಹಾನಿರ್ದೇಶಕರಿಗೆ ಪೇಜಾವರ ಮಠ ಕೃತಜ್ಞತೆ ಸಲ್ಲಿಸಿದೆ .