ಕಳೆದ ಬಾರಿ ಪ್ರವಾಹ ಉಂಟಾದಾಗ ಮುಖ್ಯಮಂತ್ರಿ ಆಗಿದ್ದವರು ಪಂಚತಾರಾ ಹೋಟೆಲ್ ನಲ್ಲಿದ್ದರು : ಜೆಡಿಎಸ್ ಗೆ ಬಿಜೆಪಿ ತಿರುಗೇಟು -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಅನೇಕ ತಾಲೂಕು ಮುಳುಗಿ ಹೋಗಿವೆ. ಹೀಗಿರುವಾಗಿ ಸಿಎಂ ದೆಹಲಿ ಪ್ರವಾಸ ಕೈಗೊಂಡಿರುವುದು ಎಷ್ಟು ಸರಿ ಎಂದು ಟ್ವೀಟ್ ಮಾಡಿದ್ದ ಜೆಡಿಎಸ್ ಗೆ ಬಿಜೆಪಿ ತಿರುಗೇಟು ನೀಡಿದೆ.

ಕಳೆದ ಬಾರಿ ಪ್ರವಾಹ ಉಂಟಾದಾಗ ಮುಖ್ಯಮಂತ್ರಿ ಆಗಿದ್ದವರು ಪಂಚತಾರಾ ಹೋಟೆಲ್ ನಲ್ಲಿದ್ದರು. ಪ್ರವಾಹ ಪೀಡಿತರಿಗೆ ಆಹಾರವನ್ನು ಎಸೆಯುವ ಮುಲಕ ಅವಮಾನ ಮಾಡಿದ್ದ ಪಕ್ಷದಿಂದ ನಾವು ಏನನ್ನು ಕಲಿಯುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದೆ.

ಜೆಡಿಎಸ್ ಟ್ವೀಟ್ ಗೆ ಖಡಕ್ ತಿರುಗೇಟು ನೀಡಿರುವ ಬಿಜೆಪಿ, ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರು ಪ್ರವಾಹ ಪೀಡಿತರಿಗೆ ಬಿಸ್ಕತ್ ಎಸೆದ ಘಟನೆಯನ್ನು ನೆನೆದಿದೆ.