ಕಾಂಗ್ರೆಸ್ಗೆ ಗುಡ್ಬೈ : ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆಗೆ.. Vishwanews24
ಕಾಂಗ್ರೆಸ್ಗೆ ಗುಡ್ಬೈ : ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆಗೆ.. Vishwanews24
ಮುಂಬಯಿ: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಡಿಸಂಬರ್ 1 ರಂದು ಶಿವಸೇನೆಗೆ ಸೇರಲಿದ್ದಾರೆ. ನಟಿ ಊರ್ಮಿಳಾ ಮಂಗಳವಾರ ಶಿವಸೇನೆ ಪಕ್ಷ ಸೇರಲಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ತಿಳಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಊರ್ಮಿಳಾ ಸೋತಿದ್ದರು. ನಂತರ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದ ಬೇಸತ್ತಿದ್ದ ಊರ್ಮಿಳಾ ಪಕ್ಷ ತೊರೆದಿದ್ದರು.
ಇತರ 11 ಜನರ ಹೆಸರನ್ನು ರಾಜ್ಯಪಾಲರ ಕೋಟಾದಿಂದ ನಾಮನಿರ್ದೇಶನ ಮಾಡಲು ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ರವಾನಿಸಿದೆ. ಈ 12 ಮಂದಿ ಪಟ್ಟಿಯನ್ನು ರಾಜ್ಯಪಾಲರೂ ಇನ್ನೂ ಅಂಗೀಕರಿಸಬೇಕಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಊರ್ಮಿಳಾ ಮಾತೋಂಡ್ಕರ್ ಅವರು ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದ್ರೆ, ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಎದುರು ಸೋಲು ಕಂಡಿದ್ದರು.
ಸೆಪ್ಟೆಂಬರ್ 10, 2019ರಂದು ಊರ್ಮಿಳಾ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಮುಂಬೈ ನಗರ ಕಾಂಗ್ರೆಸ್ನಲ್ಲಿ ಗೊಂದಲ ಏರ್ಪಟ್ಟಿರುವ ಕಾರಣ, ಈ ನಿಲುವು ತಳೆದಿರೋದಾಗಿ ಅವರು ಹೇಳಿದ್ದರು. ಸಂಜಯ್ ನಿರುಪಮ್ ಹಾಗೂ ಮಿಲಿಂದ್ ದಿಯೋರಾ ನಡುವಣ ಗುದ್ದಾಟ ಇದಕ್ಕೆಲ್ಲಾ ಕಾರಣವಾಗಿತ್ತು.
