ಕಾಂಗ್ರೆಸ್‌ ಎಚ್ಚೆತ್ತುಕೊಳ್ಳದೇ ಹೋದರೆ ಸಿದ್ದರಾಮಯ್ಯ ಅವರೇ ಆ ಪಕ್ಷದ ಬುಡಕ್ಕೆ ಬೆಂಕಿ ಇಡುವುದು ಖಚಿತ : ಎಚ್‌.ಡಿ. ಕುಮಾರಸ್ವಾಮಿ – Vishwanews24

Featured, ರಾಜ್ಯ ನ್ಯೂಸ್

ಕಾಂಗ್ರೆಸ್‌ ಎಚ್ಚೆತ್ತುಕೊಳ್ಳದೇ ಹೋದರೆ ಸಿದ್ದರಾಮಯ್ಯ ಅವರೇ ಆ ಪಕ್ಷದ ಬುಡಕ್ಕೆ ಬೆಂಕಿ ಇಡುವುದು ಖಚಿತ : ಎಚ್‌.ಡಿ. ಕುಮಾರಸ್ವಾಮಿ – Vishwanews24

ರಾಮನಗರ: ಕಾಂಗ್ರೆಸ್‌ ಎಚ್ಚೆತ್ತುಕೊಳ್ಳದೇ ಹೋದರೆ ಸಿದ್ದರಾಮಯ್ಯ ಅವರೇ ಆ ಪಕ್ಷದ ಬುಡಕ್ಕೆ ಬೆಂಕಿ ಇಡುವುದು ಖಚಿತ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಬಿಡದಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದ ವೇಳೆ ಜೆಡಿಎಸ್‌ನಲ್ಲಿ ಇದ್ದುಕೊಂಡೇ, ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿನ ಮುಖಂಡರನ್ನು ಸೇರಿಸಿಕೊಂಡು ‘ಅಹಿಂದ’ ಹೆಸರಿನಲ್ಲಿ ಸಂಘಟನೆ ಮಾಡಿದ್ದರು. ಈ ಮೂಲಕ ಜೆಡಿಎಸ್‌ ಅನ್ನೇ ಮುಗಿಸಲು ಹೊರಟಿದ್ದರು. ಈಗ ಮತ್ತೆ ಅದೇ ಕೆಲಸ ಆರಂಭಿಸಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮ ಕಾಂಗ್ರೆಸ್‌ನದ್ದೋ ಇಲ್ಲ ಅಹಿಂದ ವರ್ಗದ್ದೋ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಚರ್ಚೆಗೆ ಬನ್ನಿ ಎಂಬ ಸಿದ್ದರಾಮಯ್ಯ ಅವರ ಸವಾಲನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ನನ್ನ ತಂದೆ ನನಗೂ ರಾಜಕೀಯ ಕಳುಹಿಸಿದ್ದಾರೆ. ಪಲಾಯನ ಮಾಡುವುದಿಲ್ಲ. ನೀವು ಈ ಚರ್ಚೆಗೆ ಮಂಗಳ ಹಾಡಿದರೆ ನಾನೂ ಸುಮ್ಮನಿರುತ್ತೇನೆ. ಇಲ್ಲವಾದರೆ ಮಾತನಾಡಲು ನನಗೂ ಬಹಳಷ್ಟು ವಿಷಯಗಳಿವೆ’ ಎಂದರು.

ಕಾಪು ಬೀಡುಬದಿ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ:- vishwanews24