ಕಾಂಗ್ರೆಸ್ ವಿರೋಧ ಲೆಕ್ಕಿಸದೆ ಆರ್.ಎಸ್.ಎಸ್ ಕಾರ್ಯಾಲಯದಲ್ಲಿ ಐತಿಹಾಸಿಕ ಭಾಷಣ ಮಾಡಿದ ಪ್ರಣಬ್ ದಾದಾ.
ಕಾಂಗ್ರೆಸ್ ಪಕ್ಷದ ತೀವ್ರ ವಿರೋಧದ ನಡುವೆಯೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಕಚೇರಿ ಇರುವ ನಾಗ್ಪುರಕ್ಕೆ ಭೇಟಿ ನೀಡಿದ್ದಾರೆ. ಅರ್ಧ ಗಂಟೆಗೂ ಅಧಿಕ ಕಾಲ ಭಾಷಣ ಮಾಡಿ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಪ್ರತಿ ವರ್ಷ ನಡೆಯುವ ಸಂಘ ಶಿಕ್ಷಾ ವರ್ಗಕ್ಕೆ ಆರ್ ಎಸ್ ಎಸ್ ಗಣ್ಯ ನಾಯಕರನ್ನು ಆಹ್ವಾನಿಸುತ್ತದೆ. ಈ ಬಾರಿ ಆರ್ ಎಸ್ ಎಸ್ ಮಾಜಿ ರಾಷ್ಟ್ರಪತಿಗಳಾದ ಪ್ರಣವ್ ಮುಖರ್ಜಿ ಅವರನ್ನು ಆಹ್ವಾನಿಸಿತ್ತು. ಕಾಂಗ್ರೆಸ್ ವಲಯದಲ್ಲಿ ಈ ಸುದ್ದಿ ತೀವ್ರ ಸಂಚಲನವನ್ನು ಸೃಷ್ಟಿಸಿತ್ತು. ಪ್ರಣಬ್ ಮುಖರ್ಜಿಯವರು ಭಾಗವಹಿಸಿದಂತೆ ಭಾರಿ ಒತ್ತಡ ಹೇರುವ ತಂತ್ರವನ್ನು ಮಾಡಿತ್ತು. ಆದರೆ ಪ್ರಣಬ್ ಮುಖರ್ಜಿ ಅವರು ತಾನು ಭಾಗವಹಿಸಿಯೇ ತೀರುವುದಾಗಿ ಘೋಷಿಸಿದ್ದರು.
ಇಂದು ನಕಲಿ ಜಾತ್ಯತೀತವಾದಿಗಳಿಗೆ ಬಹುಶಃ ಮರೆಯಲಾಗದ ದಿನ ಏಕೆಂದರೆ ಭಾರತದ ಮಾಜಿ ರಾಷ್ಟಪತಿಗಳೂ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾದ ಪ್ರಣಬ್ ಮುಖರ್ಜಿ ಅವರು ಇಂದು ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪ್ರಣಬ್ ಮುಖರ್ಜಿಯವರು ಆರೆಸ್ಸೆಸ್ ನ ಈ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಕಾಂಗ್ರೆಸ್ ಹಾಗೂ ನಕಲಿ ಜಾತ್ಯತೀತವಾದಿಗಳು ಭಾರೀ ಒತ್ತಡವನ್ನು ಹೇರಿದ್ದರು. ಆದರೆ ಪ್ರಣಬ್ ದಾದಾ ಇದಕ್ಕೆಲ್ಲಾ ಹೆಚ್ಚಿನ ಗಮನ ಕೊಡದೆ ನಾಗ್ಪುರದ ಆರೆಸ್ಸೆಸ್ ಸಮಾವೇಶದಲ್ಲಿ ಸಾವಿರಾರು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಅದರ ಮುಖ್ಯ ಅಂಶಗಳು:
* ಇಂದು ನಾನಿಲ್ಲಿ ನನ್ನ ಚಿಂತನೆಗಳನ್ನು ಹಂಚಿಕೊಳ್ಳಲು ಬಂದಿದ್ದೇನೆ. ರಾಷ್ಟ್ರೀಯತೆ ಹಾಗು ದೇಶಭಕ್ತಿಯ ಕುರಿತು ಮಾತನಾಡಲು ಬಂದಿದ್ದೇನೆ.
* ಭಾರತ ಇಡೀ ಪ್ರಪಂಚಕ್ಕೆ ಪುರಾತನ ಕಾಲದಿಂದಲೂ ಗೊತ್ತಿದೆ.
* ಭಾರತಕ್ಕೆ ಆಗಮಿಸಿದ್ದ ಮೆಗಾಸ್ತಾನೀಸ್ ಅಂದೇ ಭಾರತದ ಹಿರಿಮೆಯ ಕುರಿತು ಬರೆದಿದ್ದಾನೆ.
* ಶಿಕ್ಷಣದಲ್ಲಿ ನಳಂದಾ, ವಿಕ್ರಮಶೀಲಾ, ತಕ್ಷಶಿಲಾ ಗಳು ನೂರಾರು ವರ್ಷದ ಹಿಂದೆಯೇ ಜಗತ್ತಿನ ಕಣ್ಣು ಕುಕ್ಕಿದ್ದವು.
* ಭಾರತೀಯರು ಹಿಂದಿನಿಂದಲೂ ವಸುದೈವ ಕುಟುಂಬಕಂ ತತ್ವವನ್ನು ಪ್ರತಿಪಾದಿಸಿದ್ದಾರೆ.
* ಭಾರತಕ್ಕೆ ಆಗಮಿಸಿದವರೆಲ್ಲರೂ ಇಲ್ಲಿ ನೆಲೆಸಿ ಭಾರತೀಯ ಸಂಸ್ಕೃತಿ ಅನುಸರಿಸಿ ಭಾರತೀಯರಾಗಿದ್ದಾರೆ.
* ವೈವಿಧ್ಯತೆಯಲ್ಲಿ ನಾವು ಏಕ ಸಂಸ್ಕೃತಿಯನ್ನು ಹೊಂದಿದ್ದೇವೆ. ಭಾರತ ದೇಶ ವಿಶ್ವಕ್ಕೆ ತೆರೆದಿರುವ ಸಂಸ್ಕೃತಿಯ ದೇಶ.
* ನಮ್ಮಲ್ಲಿ ವಿವಿಧತೆಗಳಿದ್ದರೂ ಎಲ್ಲರೂ ಒಗ್ಗಟ್ಟಾಗಿ ಬದುಕುತ್ತಿದ್ದೇವೆ.
* ಈ ದೇಶವನ್ನು ಆರಾಧಿಸುವುದೇ ರಾಷ್ಟ್ರೀಯತೆ.
* ವಿಶ್ವದ ಜನರು ಏಳನೇಯ ಶತಮಾನದಲ್ಲಿಯೇ ಭಾರತವನ್ನು ಬಣ್ಣಿಸಿದ್ದರು.
* ಭಾರತವೆಂಬುದು ಕ್ರಿ.ಪೂ. ಆರನೇ ಶತಮಾನದಲ್ಲೇ ಪ್ರಚುರವಾಗಿತ್ತು.
* ಹಿಂದೂ ಧರ್ಮ ಆಗ್ನೇಯ ಏಷ್ಯಾವನ್ನು ಒಂದುಗೂಡಿಸುತ್ತಿದೆ.
* ಸರ್ವೇಜನೋ ಸುಖಿನೋ ಭವಂತುಃ ನಮ್ಮ ದೇಶದ ತತ್ವ.
* ಚಂದ್ರಗುಪ್ತ ಮೌರ್ಯ ಪ್ರಬಲ ಸಾಮ್ರಾಜ್ಯ ಕಟ್ಟಿದ್ದ, ಆಶೋಕ ಮಹಾರಾಜ ದಕ್ಷ ಆಡಳಿತವನ್ನು ತೋರಿಸಿಕೊಟ್ಟಿದ್ದ.
* ಇದು ಸಮಾಜ ಸುಧಾರಣೆಗೆ ಒಳ್ಳೆಯ ಕಾಲವಾಗಿದೆ.
* ದೇಶದ ವಿವಿಧ ವಿಚಾರಧಾರೆಯನ್ನು ನಾವು ಹಂಚಿಕೊಳ್ಳಬೇಕಿದೆ.
* ದೇಶದ ಶಿಕ್ಷಣ ವ್ಯವಸ್ಥೆಯು ಇತಿಹಾಸವನ್ನು ಬಿಂಬಿಸುತ್ತದೆ.
* ಅನಾದಿ ಕಾಲದಿಂದಲೂ ಭಾರತದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದೆ.
* ಯೂರೋಪಿಹನ್ನರಿಗಿಂತವೂ ವಿಭಿನ್ನವಾದ ರಾಷ್ಟ್ರೀಯತೆಯನ್ನು ನಾವು ಹೊಂದಿದ್ದೇವೆ.
* ಬ್ರಿಟಿಷರ ಕಾಲದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಯಿತು.
* ಮೌರ್ಯ , ಗುಪ್ತರ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿತ್ತು.
* 12 ನೇ ಶತಮಾನದಲ್ಲಿ ದೆಹಲಿ ಮುಸ್ಲೀಂರ ವಶಕ್ಕೆ ಒಳಗಾಗಬೇಕಾಯಿತು. ನೂರಾರು ವರ್ಷಗಳ ಕಾಲ ಬ್ರಿಟೀಷರು ವಶಪಡಿಸಿಕೊಂಡರು. ಎಲ್ಲವನ್ನೂ ಮೆಟ್ಟಿ ನಿಂತು ಭಾರತ ಇಂದು ಬೆಳೆದುನಿಂತಿದೆ.
* ದ್ವೇಷದ ಭಾವನೆ ರಾಷ್ಟ್ರೀಯತೆಯ ಭಾವನೆಯನ್ನು ಹಾಳುಗೆಡವುತ್ತಿದೆ.
* ಎರಡೂವರೆ ಸಾವಿರ ವರ್ಷದಷ್ಟು ಸಮರ್ಥವಾದ ಆಡಳಿತ ವ್ಯವಸ್ಥೆ ಭಾರತದಲ್ಲಿದೆ. ಇಂತಹ ಸಾವಿರ ವರ್ಷಗಳಷ್ಟು ಶ್ರೀಮಂತವಾದ ಸಾಂಸ್ಕೃತಿಕ ಇತಿಹಾಸವಿದೆ.
* ವಿವಿಧ ಭಾಷೆಗಳ ನಡುವೆ ನಾವು ಏಕತೆಯೊಂದಿಗಿದ್ದೇವೆ. ದ್ವೇಷದ ಭಾವನೆ ರಾಷ್ಟ್ರೀಯತೆಯ ಭಾವನೆಯನ್ನು ಹಾಳುಗೆಡವುತ್ತಿದೆ.
* ಬ್ರಿಟೀಷರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿದ್ದರು. ಧರ್ಮದ ಆಧಾರದ ಮೇಲೆ ರಾಜಕಾರಣ ಸರಿಯಲ್ಲ.
* ಸ್ವರಾಜ್ಯ ನನ್ನ ಜನ್ಮ ಸಿದ್ಧು ಹಕ್ಕು ಎಂದು ತಿಲಕರು ಹೇಳಿದ್ದರು. ಸರ್ದಾರ್ ಪಟೇಲರು ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದರು.
* ಇಲ್ಲಿನ ಮೇಧಾವಿಗಳು ಇಡೀ ಜಗತ್ತಿನಲ್ಲಿಯೇ ಹೆಸರು ಗಳಿಸಿದ್ದವರು.
* ನಾವೆಲ್ಲರೂ ಸೇರಿ ನಮಗಾಗಿ ಅದ್ಭುತವಾದ ಸಂವಿಧಾನ ರಚಿಸಿಕೊಂಡಿದ್ದೇವೆ.
* ಭಾರತದ 5000 ವರ್ಷಗಳ ಅಡಿಪಾಯ ಭದ್ರವಾಗಿದೆ.
* ನನ್ನ 50 ವರ್ಷದ ರಾಜಕೀಯ ಜೀವನದ ಅನುಭವದ ಆಧಾರದ ಮೇಲೆ ಒಂದು ಮಾತನ್ನು ಹೇಳುತ್ತಿದ್ದೇನೆ. ಒಂದು ದೇಶ ಎಂಬ ತತ್ವದಡಿ ನಾವೆಲ್ಲರೂ ಸಾಗಬೇಕಾಗಿದೆ. ಧರ್ಮ, ಭಾಷೆ, ಪ್ರದೇಶ, ಜೀವನ ಶೈಲಿ, ಜನಾಂಗಗಳ ಆಧಾರದ ಮೇಲೆ ನಾವು ವಿಭಜನೆಗೊಳ್ಳಬಾರದು. ಭಾರತೀಯರು ಎಂಬ ಒಂದು ತತ್ವದಡಿ ಒಗ್ಗೂಡಿ ಎಲ್ಲರೂ ಒಟ್ಟಿಗೆ ಸಾಗಬೇಕಾಗಿದೆ.
* ಇದೀಗ ನಾವು ರಾಷ್ಟ್ರೀಯತೆಗೆ ಹೆಚ್ಚಿನ ಮಹತ್ವ ಕೊಡಬೇಕಿದೆ.
* ದೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ವಿವಿಧ ಭಾಷೆಗಳನ್ನು ಮಾತನಾಡುವವರಿದ್ದಾರೆ.
* ಚರ್ಚೆ ನಡೆಯಬೇಕು. ರಾಷ್ಟ್ರೀಯ ಮಹತ್ವದ ವಿಚಾರವಾಗಿ ಚರ್ಚೆಗಳು ಬದಲಾಗಬೇಕು.
* ಯಾವುದೇ ವಿಚಾರಗಳನ್ನು, ಭಿನ್ನಾಭಿಪ್ರಾಯಗಳನ್ನು ಚಿಂತನೆಗಳ ಮೂಲಕ ಆರೋಗ್ಯದಾಯಕವಾಗಿ ಬಗೆಹರಿಸಿಕೊಳ್ಳಬೇಕಿದೆ.
* ನಾವೆಲ್ಲರೂ ಭಾರತೀಯರು ಎಂಬ ಭಾವನೆ ನಮ್ಮಲ್ಲಿ ಒಡಮೂಡಬೇಕು.
* ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ನಾವೆಲ್ಲರೂ ಸೇರಿ ಹೋರಾಡಬೇಕಿದೆ.
* ಭಾರತದ ಸಂಸ್ಕೃತಿ ಇಡೀ ವಿಶ್ವಕ್ಕೆ. ಮಾದರಿಯಾಗಿದೆ. ಎಲ್ಲಾ ಸಂಸ್ಕೃತಿಗಳ ಜೊತೆಗೆ ಭಾವೈಕ್ಯತೆಯಿಂದ ಸಾಗಬೇಕಿದೆ.
* ಗಾಂಧಿಜೀ ಅತಿರೇಕವಲ್ಲದ ರಾಷ್ಟ್ರೀಯತೆಯನ್ನು ಭೋದಿಸಿದ್ದರು.
* ನೀವೆಲ್ಲ ಯುವಕರು, ಶಿಕ್ಷಿತರು. ಭಾರತದ ಭವಿಷ್ಯ ಬದಲಾಯಿಸುವತ್ತ ಶ್ರಮಿಸಿ.
* ಈ ದೇಶದಲ್ಲಿ ಜಾತಿ, ಬಣ್ಣ, ಭಾಷೆ ಎಂಬ ಭೇದ ಭಾವ ಇಲ್ಲ. ಎಲ್ಲರೂ ಒಂದಾದಾಗ ಐಕ್ಯತೆ ಸಾಧಿಸಲು ಸಾಧ್ಯ.
* ಪ್ರಜೆಗಳು ಸುಖವಾಗಿದ್ದರೆ, ರಾಜ ಸುಖವಾಗಿರುತ್ತಾನೆ. ದೌರ್ಜನ್ಯದಿಂದ ಭಾರತ ಮಾತೆ ನರಳುವಂತೆ ಮಾಡಬೇಡಿ ಎಂದು ರಾಷ್ಟ್ರದ ಜನರಿಗೆ ಕರೆಕೊಡುತ್ತಿದ್ದೇನೆ.
* ಸಮಸ್ಯೆ ಬಂದಾಗ ಎಲ್ಲರೂ ಒಗ್ಗೂಡಿ ಹೋರಾಡುವುದು ನಮ್ಮ ಕರ್ತವ್ಯ.
* ದೇಶ ಮೊದಲು ಧರ್ಮ ನಂತರ ಎಂಬ ಭಾವನೆ ನಮ್ಮಲ್ಲಿ ಬರಬೇಕು.
* ಚೀನಾ, ಏಷ್ಯಾದಲ್ಲೂ ಹಿಂದುತ್ವದ ಪ್ರಭಾವವಿದೆ.
* ನಮ್ಮ ದೇಶ ಮಹಾನ್ ವಿದ್ವಾಂಸರನ್ನು ಹುಟ್ಟಿ ಹಾಕಿದೆ. ನಮ್ಮ ದೇಶ ಧಾರ್ಮಿಕತೆಯ ಎಲ್ಲೆಯನ್ನು ಎಂದೂ ಮೀರಿಲ್ಲ.
* ಎಲ್ಲರೂ ಒಟ್ಟಾಗಿ ಸಾಗೋಣ. ಜೈ ಹಿಂದ್, ವಂದೇ ಮಾತರಂ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಾ ವರ್ಗವನ್ನು ಉದ್ದೇಶಿಸಿ ಭಾಷಣ ಮಾಡುವ ಮುನ್ನ ಆರ್ ಎಸ್ ಎಸ್ ನ ಸ್ಥಾಪಕರಾದ ಹೆಡಗೆವಾರ್ ಅವರ ಜನ್ಮಸ್ಥಳಕ್ಕೆ ಪ್ರಣಬ್ ಮುಖರ್ಜಿಯವರು ಭೇಟಿ ನೀಡಿದ್ದರು. ಹೆಡಗೆವಾರ್ ಅವರ ಜನ್ಮ ಸ್ಮಾರಕದಲ್ಲಿ ಸಂದರ್ಶಕರ ಪುಸ್ತಕದಲ್ಲಿ ಪ್ರಣವ್ ಮುಖರ್ಜಿ ಅವರು ಹೆಡಗೆವಾರ್ ಕುರಿತು ಅದ್ಭುತವಾದ ಸಂದೇಶವೊಂದನ್ನು ಬರೆದಿದ್ದಾರೆ. ‘ನಾನು ಇಂದು ಇಲ್ಲಿ ಭಾರತ ಮಾತೆಯ ಹೆಮ್ಮೆಯ ಪುತ್ರನೋರ್ವನಿಗೆ ನಮನ ಸಲ್ಲಿಸಲು ಬಂದಿದ್ದೇನೆ’ ಎಂಬ ಸಂದೇಶವನ್ನು ಸಂದರ್ಶಕರ ಡೈರಿಯಲ್ಲಿ ಪ್ರಣವ್ ಮುಖರ್ಜಿಯವರು ದಾಖಲಿಸಿದ್ದಾರೆ.
