ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ ಪುತ್ತಿಲ – ಸೋಲಿನಲ್ಲೂ ಇತಿಹಾಸ ಕಂಡ ಕಾರ್ಯಕರ್ತರ ನೆಚ್ಚಿನ ನಾಯಕ – Vishwanews24
ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ ಪುತ್ತಿಲ ..
ಸೋಲಿನಲ್ಲೂ ಇತಿಹಾಸ ಕಂಡ ಕಾರ್ಯಕರ್ತರ ನೆಚ್ಚಿನ ನಾಯಕ ..
ಎಂಪಿ ಅಭ್ಯರ್ಥಿ ಮಾಡಲು ಒತ್ತಾಯ..
ಬಂಟ್ವಾಳ: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದುತ್ವದಡಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು ಕೊನೆವರೆಗೂ ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ ಅರುಣ್ ಕುಮಾರ್ ಪುತ್ತಿಲ ರಿಗೆ ಅಭಿನಂದಿಸಿದ ಬ್ಯಾನರೊಂದು ಕಲ್ಲಡ್ಕ ಸಮೀಪದ ಕುದ್ರೆ ಬೆಟ್ಟುವಿನಲ್ಲಿ ಹಾಕಲಾಗಿದೆ.
ಕುದ್ರೆಬೆಟ್ಟುವಿನ ನಮೋ ಅಭಿಮಾನಿ ಬಳಗ ಹಾಕಿರುವ ಈ ಬ್ಯಾನರ್ ನಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಸೇರಿದಂತೆ ಜಿಲ್ಲೆಯಲ್ಲಿ ಗೆದ್ದಿರುವ ಎಲ್ಲಾ ಬಿಜೆಪಿ ಅಭ್ಯರ್ಥಿಗಳ ಫೊಟೋ ಹಾಕಲಾಗಿದೆ. ಹಾಗೂ ಕೆಳಭಾಗದಲ್ಲಿ ಸೋಲಿನಲ್ಲೂ ಇತಿಹಾಸ ಕಂಡ ಕಾರ್ಯಕರ್ತರ ನೆಚ್ಚಿನ ನಾಯಕ ಅರುಣ್ ಕುಮಾರ್ ಪುತ್ತಿಲ ಎಂದು ಉಲ್ಲೇಖಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಗಿದೆ.
ಪುತ್ತೂರಿನಲ್ಲಿ ಬಿಜೆಪಿ ಗೆ ಬಂಡಾಯವಾಗಿ ಪಕ್ಷೇತರ ನಾಗಿ ಸ್ಪರ್ಧಿಸಿ ಸಾವಿರ ಮತಗಳ ಅಂತರದಲ್ಲಿ ಪರಾಜಯವನ್ನಪ್ಪಿದ್ದರು. ಬಿಜೆಪಿಗಿಂತ 24900 ಹೆಚ್ಚು ಮತಗಳನ್ನು ಪಡೆದಿದ್ದರು. ಒಟ್ಟಿನಲ್ಲಿ ಪುತ್ತೂರು ಮಾತ್ರವಲ್ಲದೇ ಹತ್ತೂರಲ್ಲೂ ಪುತ್ತಿಲರವರ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ವಿನಲ್ಲಿ ಬ್ಯಾನರ್ ರಾರಾಜಿಸುತ್ತಿರುವುದು ನಾನಾ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರುಣಕುಮಾರ್ ಪುತ್ತಿಲ ಹೆಸರು ಟ್ರೆಂಡ್ನಲ್ಲಿದೆ. ಪುತ್ತಿಲ ಅವರನ್ನೇ ಎಂಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕೆಂಬ ಕೂಗು ಕೇಳಿ ಬಂದಿದೆ.
ಪ್ರಧಾನಿ ಮೋದಿಗೆ ಪತ್ರ
ನಳಿನ್ ಕುಮಾರ್ ಕಟೀಲ್ ಅವರಿಂದ ಪುತ್ತೂರು ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯ್ತು. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ ಪುತ್ತಿಲ್ ಅವರಿಗೆ ಟಿಕೆಟ್ ನೀಡಬೇಕು ಎಂದು ಚಿಂತಕರಾದ ಆದರ್ಶ ಗೋಖಲೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮಂಗಳೂರು: ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ದಾರುಣ ಸಾವು – Vishwanews24
