ಕಾಂಗ್ರೆಸ್ ಹೋರಾಟದ ಫಲವಾಗಿ ಈಗ ದೇಶದಾದ್ಯಂತ ಉಚಿತ ಲಸಿಕೆ ಘೋಷಣೆ ಮಾಡಲಾಗಿದೆ : ಡಿ.ಕೆ.ಶಿ – Vishwanews24
ಕಾಂಗ್ರೆಸ್ ಹೋರಾಟದ ಫಲವಾಗಿ ಈಗ ದೇಶದಾದ್ಯಂತ ಉಚಿತ ಲಸಿಕೆ ಘೋಷಣೆ ಮಾಡಲಾಗಿದೆ : ಡಿ.ಕೆ.ಶಿ – Vishwanews24
ಬೆಂಗಳೂರು, : “ಕಾಂಗ್ರೆಸ್ ನಡೆಸಿದ ಹೋರಾಟ ಫಲವಾಗಿ ಈಗ ದೇಶದಾದ್ಯಂತ ಉಚಿತ ಲಸಿಕೆಯನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ”ದೇಶದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದವರು ರಾಜ್ಯಪಾಲರನ್ನು ಭೇಟಿ ಮಾಡಿ, ಉಚಿತ ಲಸಿಕೆಗೆ ಒತ್ತಾಯಿಸಿದ್ದು, ನಮ್ಮ ಹೋರಾಟದ ಫಲವಾಗಿ ಈ ಉಚಿತ ಲಸಿಕೆ ಘೋಷಣೆ ಮಾಡಲಾಗಿದೆ” ಎಂದರು.
ಇನ್ನು ”ನಮ್ಮ ಶಾಸಕರ ನಿಧಿಯಿಂದ ಲಸಿಕೆ ನೀಡಲು ಅನುಮತಿ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ ಸರ್ಕಾರ ಅದನ್ನು ನಿರಾಕರಿಸಿತ್ತು. ಈ ಮೂಲಕ ಜನರ ಜೀವ ರಕ್ಷಿಸಲು ಸರಕಾರ ನಿರಾಕರಿಸಿದೆ” ಎಂದು ಆರೋಪಿದ್ದಾರೆ.
