ಕಾಂಗ್ರೇಸ್ ಗೂ ನನಗೂ ಮುಗಿದ ಅಧ್ಯಾಯ ; ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ ಸಿಎಂ ಇಬ್ರಾಹಿಂ – Vishwanews24
ಕಾಂಗ್ರೇಸ್ ಗೂ ನನಗೂ ಮುಗಿದ ಅಧ್ಯಾಯ ..
ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ ಸಿಎಂ ಇಬ್ರಾಹಿಂ..
ಸಿದ್ದರಾಮಯ್ಯಗಾಗಿ ದೇವೇಗೌಡರನ್ನು ಬಿಟ್ಟೆ ..
ಆದಷ್ಟು ಶೀಘ್ರ ಎಂಎಲ್‍ಸಿಗೆ ರಾಜೀನಾಮೆ ಕೊಡುತ್ತೇನೆ..
ನನ್ನ ಹಿತೈಷಿಗಳ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ..
ಬೆಂಗಳೂರು: ವಿಧಾನ ಪರಿಷತ್‍ನ ವಿಪಕ್ಷ ನಾಯಕ ಸ್ಥಾನ ಕೈತಪ್ಪಿದ ಹಿನ್ನೆಲೆ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ನಿರ್ಧಾರ ನೋಡಿ ನನಗೆ ಸಂತೋಷ ಆಯಿತು. ಇದರಿಂದ ಶಿವಕುಮಾರ್ ಹಾಗೂ ಹರಿಪ್ರಸಾದ್ ಅವರಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಅವರಿಬ್ಬರ ವಿಚಾರಧಾರೆ ಒಂದೇ ಆಗಿರುವುದರಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ವ್ಯಂಗ್ಯವಾಡಿದರು.
ಆದಷ್ಟು ಶೀಘ್ರವೇ ಎಂಎಲ್‍ಸಿಗೆ ರಾಜೀನಾಮೆ ಕೊಡುತ್ತೇನೆ. ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ :
ಗುಲಾಂ ನಬಿ ಆಜಾದ್ ಅವರಿಗೆ ಪದ್ಮ ಪ್ರಶಸ್ತಿ : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೆ ಅಸಮಾಧಾನ – Vishwanews24
ಶಿವಕುಮಾರ್‌ಗೂ ನಮಗೂ ಯಾವತ್ತು ಹೊಂದಾಣಿಕೆ ಆಗಲ್ಲ. ಅವರ ವಿಚಾರಧಾರೆಗಳು ನಮಗೆ ಆಗಲ್ಲ. ನಮಗೆ ಸಿದ್ದರಾಮಯ್ಯ ಜೊತೆ ಹೊಂದಾಣಿಕೆ ಇತ್ತು. ಆದರೆ ಕಾಂಗ್ರೆಸ್‍ಗೂ ನನಗೂ ಮುಗಿದ ಅಧ್ಯಾಯವಾಗಿದೆ. ಸಿದ್ದರಾಮಯ್ಯ ಅವರಿಂದ ನಾನು ಕಾಂಗ್ರೆಸ್‍ಗೆ ಹೋಗಿದ್ದೆ. ಸೋನಿಯಾ ಗಾಂಧಿ ಅವರು ನನ್ನ ಭಾರ ಇಳಿಸಿದ್ದಾರೆ. ನನ್ನ ಹಿತೈಷಿಗಳ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯಗಾಗಿ ಜೈಲಿಗೆ ಹೋಗಿ ಕಟ್ಟಿದ ಪಕ್ಷ ದಳ ಹಾಗೂ ದೇವೇಗೌಡರನ್ನು ಬಿಟ್ಟೆ. ನನ್ನ ನಿರ್ಣಯವನ್ನು ಶೀಘ್ರವಾಗಿ ನಿರ್ಧರಿಸುತ್ತೇನೆ. ಈ ಬಗ್ಗೆ ಕಾಂಗ್ರೆಸ್‍ಗೆ ಉತ್ತರ ಕೊಡಬೇಕು. ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕರೆದೊಯ್ದಿದ್ದೆ. ಅವರಿಗೆ ರಾಜಕೀಯ ಜೀವನ ಕೊಡಲು ಅವರ ಕಾಲಿಗೆ ಬೀಳುತ್ತೇನೆ ಎಂದರು.
ಇದನ್ನೂ ಓದಿ :
ನಾನು ನನ್ನ ಹುಟ್ಟುಹಬ್ಬ ಆಚರಣೆ ಮಾಡಲ್ಲ : ಸಿಎಂ ಬೊಮ್ಮಾಯಿ – Vishwanews24
