ಕಾಂಗ್ರೇಸ್ ಪಕ್ಷದಿಂದ ನಮ್ಮ ನಾಯಕ ಸಿದ್ದರಾಮಯ್ಯ ಅಂತಾ ಹೇಳಿಸಲಿ ನೋಡೊಣ : ಮಾಧುಸ್ವಾಮಿ ಸವಾಲು -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಮೊದಲು ಕಾಂಗ್ರೆಸ್ ಪಕ್ಷದವರು ತಮ್ಮ ತಮ್ಮ ಮನೆಯನ್ನು ಸ್ವಚ್ಛಗೊಳಿಸಲಿ, ಮತ್ತೆ ಬೇರೆ ಪಕ್ಷದ ಬಗ್ಗೆ ಮಾತನಾಡಲಿ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಿಜೆಪಿ ಬಗ್ಗೆ ಮಾತನಾಡುವ ಮೊದಲು ತಮ್ಮ ಪಕ್ಷದ ಬಗ್ಗೆ ತಿಳಿದುಕೊಳ್ಳಲಿ. ಮೊದಲು ಕಾಂಗ್ರೆಸ್ ಪಕ್ಷದವರು ತಮ್ಮ ಮನೆಯನ್ನು ತೊಳೆದುಕೊಳ್ಳಲಿ. ಆನಂತರ ಸಿದ್ದರಾಮಯ್ಯ ಬಿಜೆಪಿ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

ಸರಕಾರ ರಚನೆಯಾಗಿ ಎರಡು ತಿಂಗಳಾಗಿದೆ. ನಾವು ಕಾಂಗ್ರೆಸ್’ನವರಿಗೆ ನಿಮ್ಮ ಶಾಸಕಾಂಗ ಪಕ್ಷದ ನಾಯಕನ ಹೆಸರು ಕೊಡಿ ಅಂತಾ ಕೇಳಿದ್ದೇವೆ. ಅವರಿಗೆ ಇನ್ನೂ ಹೆಸರು ಕೊಡಲು ಆಗಿಲ್ಲ. ಸಿದ್ದರಾಮಯ್ಯ ಅವರನ್ನು ನಾಯಕ ಎಂದು ಕಾಂಗ್ರೆಸ್‌ ಪಕ್ಷದಲ್ಲಿಯೇ ಅನೇಕರು ಒಪ್ಪುವುದಿಲ್ಲ ಎಂದು ಟೀಕಿಸಿದರು.

ಬೇರೆ ಪಕ್ಷದ ಬಗ್ಗೆ ಮಾತನಾಡುವ ಮೊದಲು  ಡಿಕೆಶಿ, ಎಚ್.ಕೆ.ಪಾಟೀಲ್, ಪರಮೇಶ್ವರ ಬಾಯಿಂದ ನಮ್ಮ ನಾಯಕ ಸಿದ್ದರಾಮಯ್ಯ ಅಂತಾ ಹೇಳಿಸಲಿ ನೋಡೊಣ. ಸಿದ್ದರಾಮಯ್ಯ ಮೊದಲು ತಮ್ಮ ಮನೆ ಸರಿಮಾಡಿಕೊಳ್ಳೋದು ಕಲಿಯಲಿ ಅಂತ ಸವಾಲು ಹಾಕಿದರು.