ಕಾಂತಾರ ಅದ್ಭುತ ಯಶಸ್ಸಿನ ಬಳಿಕ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದ ಚಿತ್ರ ತಂಡ – Vishwanews24
ಕಾಂತಾರ ಅದ್ಭುತ ಯಶಸ್ಸಿನ ಬಳಿಕ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದ ಚಿತ್ರ ತಂಡ
ರಿಷಬ್ ಶೆಟ್ಟ ನಟಿಸಿ ನಿರ್ದೇಶನ ಮಾಡಿದ್ದ ‘ಕಾಂತಾರ’ ಚಿತ್ರವು ವಿಶ್ವದಲ್ಲೆಡೆ ಭರ್ಜರಿ ಸದ್ದು ಮಾಡಿದ್ದು ಗೊತ್ತೇ ಇದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರದ ಹೆಸರು ಆಸ್ಕರ್ ಅವಾರ್ಡ್ ವರೆಗೂ ಹೋಗಿದೆ. ಚಿತ್ರದ ಅದ್ಭುತ ಯಶಸ್ಸಿನ ಬಳಿಕ ಇದೀಗ ಚಿತ್ರ ತಂಡವು ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದೆ.
ಇತ್ತೀಚೆಗೆ ಮಂಗಳೂರು ಭಾಗದಲ್ಲಿ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿತ್ತು, ನಟ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ನಟಿ ಸಪ್ತಮಿ ಗೌಡ ಸೇರಿದಂತೆ ಚಿತ್ರತಂಡವು ಭಾಗವಹಿಸಿತ್ತು.
ಇದರ ವಿಡಿಯೋವನ್ನು ಇದೀಗ ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದೆ. ವರಾಹ ರೂಪಂ ಹಾಡು ಬಳಸಿ ಕೋಲದ ವಿಡಿಯೋ ಎಡಿಟ್ ಮಾಡಲಾಗಿದೆ.
ಹರಕೆ ತೀರಿಸಿದ ಕ್ಷಣಗಳು.
You surrender to the nature & worship the God, who has bestowed you with such success n freedom in life. #Kantara team witnessed the divine in real form & took the blessings of Daiva!@shetty_rishab #VijayKiragandur @gowda_sapthami @ChaluveG @Karthik1423 pic.twitter.com/vPn8mOoenR— Hombale Films (@hombalefilms) January 20, 2023
ಈ ಬಗ್ಗೆ ಟ್ವೀಟ್ ಮಾಡಿರುವ ಹೊಂಬಾಳೆ ಫಿಲಂಸ್, “ನೀವು ಪ್ರಕೃತಿಗೆ ಶರಣಾಗಿ ಮತ್ತು ಜೀವನದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯವನ್ನು ನಿಮಗೆ ನೀಡಿದ ದೇವರನ್ನು ಆರಾಧಿಸಿ. ‘ಕಾಂತಾರ’ ತಂಡವು ದೈವವನ್ನು ನೈಜ ರೂಪದಲ್ಲಿ ವೀಕ್ಷಿಸಿತು, ದೈವದ ಆಶೀರ್ವಾದವನ್ನು ಪಡೆಯಿತು” ಎಂದು ಬರೆದುಕೊಂಡಿದೆ.
ದೈವ, ದೈವ ನರ್ತಕ ಮತ್ತು ಜಮೀನ್ದಾರರು, ಮಾನವ ಮತ್ತು ಪ್ರಕೃತಿ ನಡುವಿನ ಸಂಬಂಧದ ಬಗೆಗಿನ ಕಥಾಹಂದರದಲ್ಲಿ ಕಾಂತಾರ ಚಿತ್ರವನ್ನು ಮಾಡಲಾಗಿತ್ತು.
ಮಂಗಳೂರು :ಮೆಡಿಕಲ್ ಕಾಲೇಜು ಡ್ರಗ್ಸ್ ಪ್ರಕರಣ : ಏಳು ವಿದ್ಯಾರ್ಥಿಗಳು ಮತ್ತು ಇಬ್ಬರು ವೈದ್ಯರ ಅಮಾನತು – Vishwanews24
ಉಡುಪಿ ರಜತಮಹೋತ್ಸವ : ಮಲ್ಪೆ ಕಡಲ ಕಿನಾರೆಯಲ್ಲಿ ಸಮಾರಂಭ – Vishwanews24
