ಕಾಂತಾರ ಸಿನೆಮಾದ ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ಅರ್ಜಿ ವಜಾಗೊಳಿಸಿದ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ – Vishwanews24

Featured, ರಾಷ್ಟ್ರ ನ್ಯೂಸ್

ಕಾಂತಾರ ಸಿನೆಮಾದ ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ಅರ್ಜಿ ವಜಾಗೊಳಿಸಿದ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ

ತಿರುವನಂತಪುರಂ: ಕಾಂತಾರ ಸಿನೆಮಾದ ಜೀವಾಳವಾಗಿದ್ದ ವರಾಹ ರೂಪಂ ಹಾಡಿ ವಿವಾದದಲ್ಲಿ ಇದೀಗ ಚಿತ್ರ ತಂಡ ಗೆಲುವನ್ನು ಸಾಧಿಸಿದ್ದು, ಕೃತಿಚೌರ್ಯದ ಆರೋಪ ಮಾಡಿದ್ದ ‘ಥೈಕ್ಕುಡಂ ಬ್ರಿಡ್ಜ್’ ಅರ್ಜಿಯನ್ನು ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ ವರಾಹರೂಪಂ ಹಾಡಿನ ಬರಹಗಾರ ಶಶಿಧರ್‌ ಕಾವೂರು, ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಿದ ಬಳಿಕ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದೆ ಮತ್ತು ವರಾಹರೂಪಂ ಹಾಡಿಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವು ಮಾಡಿದೆ. ನ್ಯಾಯ ಗೆದ್ದಿತು. ಜೈ ತುಳುನಾಡು ಎಂದು ಬರೆದುಕೊಂಡಿದ್ದಾರೆ.

ಮಂಗಳೂರು: ಇನ್ಮುಂದೆ ಪಾಸ್‌ಪೋರ್ಟ್‌ನಲ್ಲಿ ಸರ್ ನೇಮ್ ಕಡ್ಡಾಯ : ಯುಎಇ – Vishwanews24

Leave a Reply