ಕಾಪುವಿನಲ್ಲಿ ಮತ್ತೆ ಅಬ್ಬರದ ” ಕಾಪು ಪಿಲಿ ಪರ್ಬ- ಸೀಸನ್ -2 “ಹುಲಿ ವೇಷ ಕುಣಿತ ಸ್ಪರ್ಧೆ:vishwanews24
ಕಾಪುವಿನಲ್ಲಿ ಮತ್ತೆ ಅಬ್ಬರದ ” ಕಾಪು ಪಿಲಿ ಪರ್ಬ- ಸೀಸನ್ -2 “ಹುಲಿ ವೇಷ ಕುಣಿತ ಸ್ಪರ್ಧೆ:vishwanews24
ಲಕ್ಷಗಟ್ಟಲೆ ಬಹುಮಾನ-ಅವಿಭಜಿತ ಜಿಲ್ಲೆಯಿಂದ ಹತ್ತಕ್ಕೂ ಅಧಿಕ ತಂಡ ಭಾಗವಹಿಸುವಿಕೆ
ರಕ್ಷಣಾಪುರ ಜವನೆರ‍್ನ ಕೂಟ ಕಾಪು ಇವರಿಂದ ಆಯೋಜನೆ
ಕಾಪು : ರಕ್ಷಣಾಪುರ ಜವನೆರ್ ಕಾಪು ಇವರ ಸಾರಥ್ಯದಲ್ಲಿ ಕಾಪು ಪಿಲಿ ಪರ್ಬ ಹುಲಿ ವೇಷ ಕುಣಿತ ಸ್ಪರ್ಧೆ ಅಕ್ಟೋಬರ್ 11 ರಂದು ಮಧ್ಯಾಹ್ನ 3.30 ಗಂಟೆಗೆ ಕಾಪುವಿನ ಬಂಟರ ಸಂಘದ ಆವರಣದಲ್ಲಿ ಆಯೋಜಿಲಾಗಿದೆಂದು ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಯೋಜನ ತಂಡದ ಅಧ್ಯಕ್ಷ ನವೀನ್ ಎನ್ ಶೆಟ್ಟಿ ತಿಳಿಸಿದರು.
ದಸರಾ ಹಬ್ಬದ ಪ್ರಯುಕ್ತ ರಾಜಕೀಯ ರಹಿತವಾಗಿ “ಕಾಪು ಪಿಲಿ ಪರ್ಬ -೦೨”ನಡೆಯಲಿದ್ದು ಊರು ಪರವೂರಿನ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಝಿ ಕನ್ನಡ ಡ್ರಾಮ ಜೂನಿಯರ್ಸ್ ಸೀಜನ್ 4 ವಿಜೇತೆ ಸಮೃದ್ಧಿ ಮೊಗವೀರ ತಂಡದವರಿಂದ ಯಕ್ಷ ನೃತ್ಯ ರೂಪಕ,ಕಿನ್ನಿಗೊಳಿ ಕ್ರೀವ್ಸ್ ಇನ್ ಕ್ರಿವ್ ಸ್ಟುಡಿಯೋ ಡ್ಯಾನ್ಸ್ ತಂಡದಿಂದ ನೃತ್ಯ ವೈಭವ ,ಕುಣಿತ ಭಜನೆ ನಡೆಯಲಿದೆ.
ಕಾಪುವಿನ ಇತಿಹಾಸದಲ್ಲಿ ರಕ್ಷಣಾಪುರ ಜವನೆರ್ ಕೂಟ ಎರಡನೇ ಬಾರಿ ಆಯೋಜಿಸುತ್ತಿರುವ ಸ್ಪರ್ಧೆಯಾಗಿದ್ದು ವಿಜೇತ ತಂಡಗಳಿಗೆ ಪ್ರಥಮ,ದ್ವಿತೀಯ,ತೃತೀಯ ತಲಾ ಒಂದು ಲಕ್ಷ,ಎಪ್ಪತೈದು ಸಾವಿರ,ಮೂವತ್ತು ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಮತ್ತು ವಿಶೇಷ ಕರಿಹುಲಿ,ಅಕ್ಕಿಮುಡಿ ಹಾರಿಸುವುದು,ಅತ್ಯುತ್ತಮ ಹುಲಿ,ವೈಯಕ್ತಿಕ ವೇಷ ಕುಣಿತದಾರ,ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುತ್ತೆಂದರು.
ವಿಶೇಷ ಆಕರ್ಷಣೆಯಾಗಿ ಕೋಸ್ಟಲ್‌ವುಡ್‌ನ ಸಿನಿ ತಾರೆಯರು,ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದು ಕಾಪುವಿನ ಇತಿಹಾಸ ಪುಟ ಸೇರುವ ರೀತಿಯ ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ಪ್ರವೇಶ ನೀಡಿದ್ದು ಸುಮಾರು ಹತ್ತಕ್ಕೂ ಅಧಿಕ ಹುಲಿ ವೇಷ ತಂಡಗಳು ಭಾಗವಹಿಸುವ ನಿರೀಕ್ಷೆ ಇಡಲಾಗಿದೆ ಸಾರ್ವಜನಿಕರಿಗೆ ಮನರಂಜನೆಯ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಈಗಾಗಲೇ ರಕ್ಷಣಾಪುರ ಜವನರ‍್ನ ಕೂಟ ತಂಡದಲ್ಲಿ ನೂರಾರು ಪ್ರಬಲ ಯುವಕರು ಸೇರಿಕೊಂಡು ನಡೆಯುವ ಕಾರ್ಯಕ್ರಮ ಇದಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಲ್ಲಿ ನಡೆಸುವ ಇರಾದೆ ಹೊಂದಿದ್ದು ಸಾರ್ವಜನಿಕರ ಸಹಕಾರ ಅಗತ್ಯವೆಂದು ಅವರು ತಿಳಿಸಿದರು.
ಸಂಘಟಕರಾದ ಗಣೇಶ್ ಕೋಟ್ಯಾನ್, ಕಾರ್ತಿಕ್ ಅಮೀನ್, ರಮೀಜ್ ಹುಸೇನ್, ದೀಪಕ್ ಕುಮಾರ್ ಎರ್ಮಾಳು, ಶಾಂತಲತಾ ಶೆಟ್ಟಿ, ಆಶಾ ಅಂಚನ್, ಅಶ್ವಿನಿ ನವೀನ್, ಅಖಿಲೇಶ್ ಕೋಟ್ಯಾನ್, ದೇವರಾಜ್ ಕೋಟ್ಯಾನ್, ಸುಧೀರ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
