ಕಾಪುವಿನಲ್ಲಿ ಸುಮಾರು 2 ಗಂಟೆಯಿಂದ ಅನಾಥವಾಗಿ ರಸ್ತೆ ಮಧ್ಯ ನಿಂತ ಅನುಮಾನಸ್ಪದ ಕಾರು: vishwanews24
ಕಾಪುವಿನಲ್ಲಿ ಸುಮಾರು 2 ಗಂಟೆಯಿಂದ ಅನಾಥವಾಗಿ ರಸ್ತೆ ಮಧ್ಯ ನಿಂತ ಅನುಮಾನಸ್ಪದ ಕಾರು: vishwanews24
ಕಾಪು: ಕಾಪು ಪೇಟೆಯ ಮುಖ್ಯರಸ್ತೆಯಲ್ಲಿ ಸುಮಾರು 2 ಗಂಟೆಯಿಂದ ಅನುಮಾನಸ್ಪದವಾದ ಕಾರೊಂದು ಅಡ್ಡಲಾಗಿ ನಿಂತಿದ್ದು ಟ್ರಾಫಿಕ್ ಜಾಮ್ ಉಂಟಾಗಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಸಹ ಉಪನಿರೀಕ್ಷಣಾಧಿಕಾರಿ ಗೋಪಾಲ್ ಶೆಟ್ಟಿಗಾರ ಅವರು ವಾಹನದ ಮಾಲೀಕನನ್ನು ಪತ್ತೆ ಹಚ್ಚಿ ಸ್ಥಳಕ್ಕೆ ಕರೆತಂದು ವಾಹನ ಸಮೇತ ಜಪ್ತಿ ಮಾಡಿ ಠಾಣೆಗೆ ಕರೆದೊಯ್ಯುತ್ತಿದ್ದಾರೆ.

ವಾಹನದ ಚಾಲಕನನ್ನು ರಾಜೇಂದ್ರ ಎಂದು ಗುರುತಿಸಲಾಗಿದ್ದು ಈತನಿಂದಾಗಿ ಎರಡು ಗಂಟೆಗಳ ಕಾಪು ನಗರದಲ್ಲಿ ಸಂಚಾರ ಅಸ್ತವ್ಯಸ್ತ ವಾಗಿತ್ತು ಈತನ ವಿರುದ್ಧ ಸಂಚಾರಿ ನಿಯಮಗಳನ್ನು ಮುರಿದ ಬಗ್ಗೆ ಕೇಸು ದಾಖಲಿಸುವುದಾಗಿ ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

