ಕಾಪು: ಅಪರಿಚಿತ ವ್ಯಕ್ತಿಯೊಬ್ಬ ದಿನಸಿ ಸೇಲ್ಸ್ ಮೆನ್ ನ ಪರ್ಸ್ ಎಗರಿಸಿ ಲಕ್ಷಾಂತರ ರೂ. ದರೋಡೆ – Vishwanews24
ಕಾಪು: ಅಪರಿಚಿತ ವ್ಯಕ್ತಿಯೊಬ್ಬ ದಿನಸಿ ಸೇಲ್ಸ್ ಮೆನ್ ನ ಪರ್ಸ್ ಎಗರಿಸಿ ಲಕ್ಷಾಂತರ ರೂ. ದರೋಡೆ
ಕಾಪು: ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ದಿನಸಿ ಸೇಲ್ಸ್ ಮೆನ್ ವೃತ್ತಿ ಮಾಡುತ್ತಿದ್ದ ವ್ಯಕ್ತಿಯಲ್ಲಿದ್ದ ಲಕ್ಷಾಂತರ ರೂ. ನಗದನ್ನು ದೋಚಿ ಪರಾರಿಯಾದ ಘಟನೆ ಕಾಪು ಫ್ಲೈ ಓವರ್ ಅಡಿಯಲ್ಲಿ ನಡೆದಿದೆ.
ಉಡುಪಿಯ ಉಮೇಶ್ ಪರ್ಸ್ ಮತ್ತು ಲಕ್ಷಾಂತರ ರೂ. ಕಳೆದುಕೊಂಡಿರುವ ವ್ಯಕ್ತಿ.ಉಮೇಶ್ ಅವರು ನಿಟ್ಟೂರಿನ ಟ್ರೇಡರ್ಸ್ವೊಂದರಲ್ಲಿ ಸೇಲ್ಸ್ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು ವಾಹನದಲ್ಲಿ ಸಾಮಾಗ್ರಿಗಳನ್ನು ನಿಟ್ಟೂರಿನಿಂದ ಬೈಕಂಪಾಡಿವರೆಗೆ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು. ಬೆಳಗ್ಗೆ ಸಾಮಗ್ರಿಗಳನ್ನು ತುಂಬಿಸಿಕೊಂಡು ವಿವಿಧ ಕಡೆಗಳಲ್ಲಿ ಲೈನ್ ಸೇಲ್ ಮಾಡಿ ಹಣ ಸಂಗ್ರಹಿಸಿಕೊಂಡು ಮರಳಿ ನಿಟ್ಟೂರಿನ ಕಡೆ ಹೋಗುತ್ತಿರುವಾಗ ಕಾಪು ಹೊಸ ಮಾರಿಗುಡಿ ಮುಂಭಾಗದ ಅಂಡರ್ಪಾಸ್ನಲ್ಲಿ ಈ ಘಟನೆ ಸಂಭವಿಸಿದೆ.
ಪಣಂಬೂರು ಬೀಚ್ – ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರು ಯುವಕರು ನಾಪತ್ತೆ – Vishwanews24
ಕಾಪುವಿನ ಜನರಲ್ ಸ್ಟೋರ್ನ ಮಾಲಕರೊಬ್ಬರು ಕರೆ ಮಾಡಿ ಗೋಧಿ ಕಡಿ ಬೇಕು ಎಂದು ತಿಳಿಸಿದ್ದು, ಅದರಂತೆ ರಾತ್ರಿ 8.45ಕ್ಕೆ ಅಂಗಡಿಗೆ ನೀಡಿ ಹಣವನ್ನು ಪಡೆದು ಅಂಡರ್ಪಾಸ್ ಕೆಳಕಡೆ ತಲುಪುವಾಗ ಅಪರಿಚಿತ ಬೈಕ್ ಸವಾರನೋರ್ವ ಉಮೇಶ್ ಬಳಿ ಬೈಕನ್ನು ನಿಲ್ಲಿಸಿ ಅವರಲ್ಲಿದ್ದ ಬ್ಯಾಗನ್ನು ಕಸಿದು ಪರಾರಿಯಾಗಿದ್ದಾನೆ.
ಬ್ಯಾಗಿನಲ್ಲಿ ಲಕ್ಷಾಂತರ ರೂ. ಇತ್ತು ಎಂದು ಉಮೇಶ್ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ : ತನಿಖೆ NIA ವರ್ಗಾವಣೆ – Vishwanews24
