ಕಾಪು: ಅಪಾರ್ಟ್‌ಮೆಂಟ್ ಕಂಪೌಂಡ್ ಕುಸಿತ – ರಿಕ್ಷಾ, ಬೈಕ್‌ಗಳಿಗೆ ಹಾನಿ – Vishwanews24

Featured, ಉಡುಪಿ

ಕಾಪು: ಅಪಾರ್ಟ್‌ಮೆಂಟ್ ಕಂಪೌಂಡ್ ಕುಸಿತ – ರಿಕ್ಷಾ, ಬೈಕ್‌ಗಳಿಗೆ ಹಾನಿ

ಕಾಪು, : ರಾಷ್ಟ್ರೀಯ ಹೆದ್ದಾರಿ 66ರ ಕಾಪು ಅಪಾರ್ಟ್ಮೆಂಟ್ ಬಳಿ ಕಂಪೌಂಡು ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾ ಜಖಂಗೊಂಡಿರುವ ಘಟನೆ ನಡೆದಿದೆ.

ಈ ಘಟನೆ ಭಾನುವಾರ ಬೆಳ್ಳಗ್ಗೆ ಸಂಭವಿಸಿದ್ದು, ಎರಡು ಬೈಕ್, ಮತ್ತು ಸ್ಕೂಟಿ ಸಂಪೂರ್ಣ ಮಣ್ಣಿನಡಿ ಸಿಲುಕಿದ್ದು, ರಿಕ್ಷಾ ಕಂಪೌಂಡ್ ಕುಸಿತದ ರಭಸಕ್ಕೆ ಮುಂದೆ ಚಲಿಸಿ, ಹಾನಿಗೀಡಾಗಿದೆ.

ಇನ್ನು ಅಪಾರ್ಟ್‌ಮೆಂಟ್ ನಿವಾಸಿಗಳಾದ ಅಬ್ದುಲ್ ಖಾದರ್, ಅಬ್ದುಲ್ ಕಬೀರ್ ಎಂಬವರ ಬೈಕ್ ಮತ್ತು ಶರೀಪ್ ಎಂಬವರ ರಿಕ್ಷಾ ಹಾನಿಗೊಳಗಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.

ಉಡುಪಿ: ಯುವ ನ್ಯಾಯವಾದಿ ನಿಧನ – VIshwanews24

ರಾ.ಹೆ. 66 ರ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆದಿದ್ದು ಈ ವೇಳೆ ಸಮರ್ಪಕ ರೀತಿಯಲ್ಲಿ ಫಿಲ್ಲಿಂಗ್ ನಡೆಯದಿರುವುದೇ ಘಟನೆ ಕಾರಣ ಎಂದು ಅಪಾರ್ಟ್ಮೆಂಟ್ ಮಾಲಕರು ಮತ್ತು ನಿವಾಸಿಗಳು ದೂರಿದ್ದಾರೆ.

Leave a Reply