ಕಾಪು ಕಲ್ಯಾ ಬಬ್ಬುಸ್ವಾಮೀ ದೈವಸ್ಥಾನ ಸಮಗ್ರ ಜೀರ್ಣೋದ್ಧಾರ – ಶಿಲಾನ್ಯಾಸ ಕಾರ್ಯಕ್ರಮ.vishwanews24
ಕಾಪು ಕಲ್ಯಾ ಬಬ್ಬುಸ್ವಾಮೀ ದೈವಸ್ಥಾನ ಸಮಗ್ರ ಜೀರ್ಣೋದ್ಧಾರ – ಶಿಲಾನ್ಯಾಸ ಕಾರ್ಯಕ್ರಮ.
ಕಾಪು: ಸುಮಾರು ಮೂವತೈದು ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪುರಸಭಾ ವ್ಯಾಪ್ತಿಯ ಕಾಪು ಕಲ್ಯಾದ ಐತಿಹಾಸಿಕ ಹಿನ್ನೆಲೆಯ ದೈವರಾಜ ಬಬ್ಬುಸ್ವಾಮೀ ಹಾಗೂ ಸಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರದ ಅಂಗವಾಗಿ ಆದಿತ್ಯವಾರ ಗಣ್ಯರ ಸಮ್ಮುಖದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.
ಶ್ರೀನಿವಾಸ ತಂತ್ರಿ ಹಾಗೂ ಶ್ರೀಧರ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್,ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಶ್ರೀಕರ ಶೆಟ್ಟಿ ಕಲ್ಯಾ,ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೆಸರ ರಮೇಶ್ ಹೆಗ್ಡೆ ಕಲ್ಯಾ,ರಮೇಶ್ ಶೆಟ್ಟಿ ಕಲ್ಯಾ,ನೀಲಾನಂದ ನಾಯ್ಕ್,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಕನ್ಯಾನ ಗುತ್ತು,ಹಾಗೂ ಊರಿನ ಸಮಸ್ತರು,ಕಮಿಟಿ ಸದಸ್ಯರು ಉಪಸ್ಥಿತರಿದ್ದರು..
