ಕಾಪು : ಕಾಂಗ್ರೆಸ್ ಮತಾಂತರ ವಿರೋಧಿ ಮಸೂದೆಯನ್ನು ಏಕೆ ವಿರೋಧಿಸುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ : ಶೋಭಾ ಕರಂದ್ಲಾಂಜೆ – Vishwanews24

Featured, ಉಡುಪಿ

ಕಾಪು : ಕಾಂಗ್ರೆಸ್ ಮತಾಂತರ ವಿರೋಧಿ ಮಸೂದೆಯನ್ನು ಏಕೆ ವಿರೋಧಿಸುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ : ಶೋಭಾ ಕರಂದ್ಲಾಂಜೆ – Vishwanews24

ಕಾಪು : ಕಾಂಗ್ರೆಸ್ ಮತಾಂತರ ವಿರೋಧಿ ಮಸೂದೆಯನ್ನು ಏಕೆ ವಿರೋಧಿಸುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಶೋಭಾ ಕರಂದ್ಲಾಂಜೆ ಪ್ರಶ್ನಿಸಿದರು.

ಮತಾಂತರ ವಿರೋಧಿ ಮಸೂದೆಗೆ ಕಾಂಗ್ರೆಸ್ ಪಕ್ಷದಿಂದ ವಿರೋಧದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶೋಭಾ, “ಮತಾಂತರ ವಿರೋಧಿ ಕಾನೂನು ಈ ದೇಶದ ಜನರ ಆಶಯವಾಗಿದೆ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಮತ ಬ್ಯಾಂಕ್‌ನಲ್ಲಿ ಕೇಂದ್ರೀಕೃತವಾಗಿದೆ. ಲವ್ ಜಿಹಾದ್, ಚಿಕಿತ್ಸೆ , ಬಡತನ ಎಂದು ದುರುಪಯೋಗ ಮಾಡಲಾಗುತ್ತಿದೆ. ಎಷ್ಟೋ ಬಡವರನ್ನು ಮತಾಂತರಿಸಿದ ಉದಾಹರಣೆಗಳಿವೆ. ಮಂಗಳೂರಿನಲ್ಲಿ ಬಲವಂತದ ಮತಾಂತರದಿಂದ ನಾಲ್ವರ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಜೀವಂತ ಉದಾಹಣೆಯಾಗಿದೆ. ಹೀಗಾಗಿ ಸಮಾಜದ ಶಾಂತಿ ಕಾಪಾಡಲು ಈ ಕಾನೂನು ಮುಖ್ಯವಾಗಿದೆ.

ಓಟ್ ಬ್ಯಾಂಕಿಗಾಗಿ ಕಾಂಗ್ರೆಸ್ ಕಾಯ್ದೆ ವಿರೋಧಿಸುತ್ತಿದೆ. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ನದ್ದು ಅಲ್ಪಸಂಖ್ಯಾತ ಓಟಲ್ಲಿ ಗೆಲ್ಲುವ ಪ್ಲ್ಯಾನ್. ಹಾಗಾದರೆ ನಿಮಗೆ ಬಹು ಸಂಖ್ಯಾತರ ಓಟ್ ಬೇಡವೇ? ಅಲ್ಪಸಂಖ್ಯಾತ ರ ಓಟಲ್ಲಿ ಗೆದ್ದು ಬರ್ತೀರಾ? ಅವರವರು ಅವರ ಧರ್ಮದಲ್ಲಿ ಇದ್ದರೆ ನಿಮಗೆ ಏನು ಸಮಸ್ಯೆ? ಎಂದು ಪ್ರಶ್ನಿಸಿದರು.

ಕರ್ನಾಟಕದ ಜನರು ಕಾಂಗ್ರೆಸ್ ನಾಯಕರ ಶುಭನುಡಿಗಳನ್ನು ಗಮನಿಸುತ್ತಿದ್ದಾರೆ. 2023 ರಲ್ಲಿ ಅಧಿಕಾರಕ್ಕೆ ಬಂದರೆ ಮತಾಂತರ ವಿರೋಧಿ ಮಸೂದೆಯನ್ನು ತೆಗೆದುಹಾಕುತ್ತೇವೆ ಎಂದು ಡಿಕೆಎಸ್ ಹೇಳಿಕೊಂಡಿದ್ದಾರೆ . ಆದರೆ ಕರ್ನಾಟಕದ ಜನತೆ ಅವರಿಗೆ ಅಧಿಕಾರ ನೀಡುತ್ತಾರೋ, ಇಲ್ಲವೋ ಎಂದು ಮೊದಲು ನೋಡಬೇಕು ಎಂದು ಲೇವಡಿ ಮಾಡಿದರು.

ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್  ನಟಿ ರಚಿತಾ ರಾಮ್ ಭೇಟಿ – Vishwanews24