ಕಾಪು: ಕೆವೈಸಿ ಅಪ್‍ಡೇಟ್ ಮಾಡುವ  ನೆಪದಲ್ಲಿ ಮಹಿಳೆಗೆ 6.19 ಲ.ರೂ. ವಂಚನೆ – Vishwanews24

Featured, ಉಡುಪಿ

ಕಾಪು: ಕೆವೈಸಿ ಅಪ್‍ಡೇಟ್ ಮಾಡುವ  ನೆಪದಲ್ಲಿ ಮಹಿಳೆಗೆ 6.19 ಲ.ರೂ. ವಂಚನೆ

ಕಾಪು : ಕೆವೈಸಿ ಅಪ್‍ಡೇಟ್ ಮಾಡುವ ನೆಪದಲ್ಲಿ ಮಹಿಳೆಯೊಬ್ಬರ ಖಾತೆಯಿಂದ 6.19 ಲ.ರೂ. ನಗದು ಅಕ್ರಮವಾಗಿ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.

ಏ.24 ರಂದು ಸೀತಮ್ಮ ಎಂಬವರು ತಮ್ಮ ಮನೆಯಲ್ಲಿ ಇದ್ದ ವೇಳೆ ತಮ್ಮ ಹಾಗೂ ತಮ್ಮ ಪತಿಯ ಮೊಬೈಲ್ ನಂಬರಿಗೆ ಬ್ಯಾಂಕ್ ಎಕೌಂಟ್ ಹೋಲ್ಡ್ ಆಗಿದ್ದು ಕೆವೈಸಿ ಅಪ್‍ಡೇಟ್ ಮಾಡುವ ಬಗ್ಗೆ ಕರೆ ಮಾಡುವಂತೆ ನಂಬರ್ ನ್ನು ಸೂಚಿಸಲಾಯಿತು. ಇದನ್ನು ನಂಬಿದ ಸೀತಮ್ಮ ಅವರು ಮೆಸೇಜ್‍ನಲ್ಲಿ ಸೂಚಿಸಿದಂತೆ ಆ ನಂಬರಿಗೆ ಕರೆ ಮಾಡಿದಾಗ ಆರೋಪಿಗಳು ಸೂಚಿಸಿದಂತೆ ಓಟಿಪಿಗಳನ್ನು ನೀಡಿರುತ್ತಾರೆ. ಬಳಿಕ ಅನುಮಾನಗೊಂಡು ಮೆಸೇಜ್‍ಗಳನ್ನು ಪರಿಶೀಲಿಸಿದಾಗ ತಮ್ಮ ಬ್ಯಾಂಕ್ ಖಾತೆಯಿಂದ 6,19,000 ರೂ. ಕಟಾವು ಆಗಿರುವುದು ತಿಳಿದು ಬಂದಿದ್ದು ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಮತದಾನ  – Vishwanews24

Leave a Reply