ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ – vishwanews24

Featured, ಉಡುಪಿ

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ

ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ ತನ್ನ ಅಪ್ರಾಪ್ತ ಮಗಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಮಾರ್ಚ್ 20ರಂದು ಬೆಳಪು ಗ್ರಾಮದ ಪುಂಚಲಕಾಡಿನಲ್ಲಿ ನಡೆದಿದೆ.

ಕಾಣೆಯಾದವರನ್ನು ಕಾಪು ತಾಲೂಕಿನ ಬೆಳಪು ಗ್ರಾಮದ ಪುಂಚಲಕಾಡು ನಿವಾಸಿ ರೇಣುಕಾ ಗಂಗಾಧರ್ ಪೂಜೇರ್(28) ಹಾಗೂ ಪುತ್ರಿ ಪ್ರತೀಕ್ಷಾ ಗಂಗಾಧರ್ ಪೂಜೇರ್(11) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:

ಕಾಪು: ತಮಿಳುನಾಡು ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಬಿದ್ದು ಮೀನುಗಾರ ನಾಪತ್ತೆ – vishwanews24 

ಮಾರ್ಚ್ 20ರ ಮಧ್ಯಾಹ್ನ ಊಟದ ವಿಚಾರವಾಗಿ ಪತಿ ಗಂಗಾಧರ್ ಮತ್ತು ರೇಣುಕಾ ನಡುವೆ ಸಣ್ಣ ಮಟ್ಟದ ಮಾತಿನ ಚಕಮಕಿ ನಡೆದಿದೆ. ಜಗಳದ ನಂತರ ಗಂಗಾಧರ್ ಕೆಲಸಕ್ಕೆ ತೆರಳಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ. ರೇಣುಕಾ ಅವರು ತಮ್ಮ ಮೊಬೈಲ್ ಫೋನ್ ಅನ್ನು ಮನೆಯಲ್ಲೇ ಬಿಟ್ಟು, ಮಗಳೊಂದಿಗೆ ನಾಪತ್ತೆಯಾಗಿದ್ದಾರೆ.

ಪತಿ ಗಂಗಾಧರ್ ಅವರು ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ನಿ-ಮಗಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ:

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ – vishwanews24

Leave a Reply