ಕಾಪು ಕ್ಷೇತ್ರದಲ್ಲಿ ನಡೆದ ಧರ್ಮಯುದ್ದದಲ್ಲಿ ಧರ್ಮದ ಗೆಲುವು : ಲಾಲಾಜಿ ಆರ್. ಮೆಂಡನ್

Featured, ಉಡುಪಿ

ಕಾಪು ಕ್ಷೇತ್ರದಲ್ಲಿ ನಡೆದ ಧರ್ಮಯುದ್ದದಲ್ಲಿ ಧರ್ಮದ ಗೆಲುವು : ಲಾಲಾಜಿ ಆರ್. ಮೆಂಡನ್

ಕಾಪು, ಮೇ 15 : ಕಾಪು ಕ್ಷೇತ್ರದ ಧರ್ಮಕ್ಕೆ ಗೆಲುವಾಗಿದೆ. ಅಧರ್ಮಕ್ಕೆ ಸೋಲಾಗಿದೆ. ಕಳೆದ ನಾಲ್ಕೂವರೆ ವರ್ಷಗಳ ಕಾಲ ವಿನಯಕುಮಾರ್ ಸೊರಕೆ ಮತ್ತವರ ತಂಡ ನಡೆಸುತ್ತಿದ್ದ ದುರಾಡಳಿತದಿಂದ ಜನರಿಗೆ ಮುಕ್ತಿ ದೊರಕಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ಪೂರ್ತಿ ಮತ್ತು ಕಾರ್ಯಕರ್ತರ ಪರಿಶ್ರಮಕ್ಕೆ ಸಂದ ಜಯ ಇದಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಮಂಗಳವಾರ ಕಾಪು ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬಿಜೆಪಿ ಕಛೇರಿಗೆ ಭೇಟಿ ನೀಡಿ, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಆಡಳಿತದ ವೇಳೆ ಹಲವಾರು ಮಂದಿ ಬಿಜೆಪಿ ಕಾರ್ಯಕರ್ಯತರು, ಹಿಂದೂ ಪರ ಕಾರ್ಯಕರ್ತರು ಮತ್ತು ಕ್ಷೇತ್ರದ ಜನತೆ ದೌರ್ಜನ್ಯಕ್ಕೆ ಒಳಗಾಗುವಂತಾಗಿತ್ತು. ಪಕ್ಷದ ಕಾರ್ಯಕರ್ತರು ಹಲವು ರೀತಿಯಲ್ಲಿ ಚಿತ್ರಹಿಂಸೆಗೆ ಗುರಿಯಾಗುವಂತಾಗಿತ್ತು. ಅವರ ಆಕ್ರೋಶವೇ ಸೊರಕೆಯವರ ರಾಜಕೀಯ ಬದುಕಿಗೆ ಕತ್ತರಿ ಹಾಕಿದೆ. ಪುನರ್ಜನ್ಮ ನೀಡಿದ್ದ ಕ್ಷೇತ್ರದಿಂದಲೇ ಅವರನ್ನು ಹುಟ್ಟೂರಿಗೆ ಸಾಗ ಹಾಕುವ ಕೆಲಸ ನಡೆದಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾಂಗ್ರೆಸ್‍ನ ಭ್ರಷ್ಟ, ಹಿಂದೂ ವಿರೋ ದುರಾಡಳಿತಕ್ಕೆ ಜನ ತಿಲಾಂಜಲಿ ನೀಡಿದ್ದಾರೆ. ಆ ಮೂಲಕ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಸಿದೆ. ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂಬ ಮೋದಿ ಘೋಷಣೆಗೆ ಸಂದ ಜಯವಾಗಿದ್ದು, 2019ರ ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ ಎಂದರು.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಕ್ಷೇತ್ರವನ್ನು ದೊಡ್ಡ ಅಂತರದಿಂದ ಗೆದ್ದಿದ್ದೇವೆ. ಗೆಲುವಿಗಾಗಿ ಬೀಗುವುದಿಲ್ಲ. ಗೆಲುವನ್ನು ಕ್ಷೇತ್ರದ ಪ್ರತೀಯೊಬ್ಬ ಕಾರ್ಯಕರ್ತರಿಗೆ ಅರ್ಪಿಸಿ, ಮತದಾರರ ಋಣ ತೀರಿಸುವ ಪ್ರಯತ್ನ ನಮ್ಮಿಂದ ನಡೆಯಬೇಕಿದೆ. ರಾಷ್ಟ್ರಕ್ಕಾಗಿ ಬಿಜೆಪಿ ಎಂಬ ಚಿಂತನೆಯೊಂದಿಗೆ ಕೆಲಸ ಮಾಡಿದ ಪರಿಣಾಮ ನಾವು ಗೆಲುವು ಸಾಸಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಒಂದುಗೂಡಿ ಕಾರ್ಯನಿರ್ವಹಿಸೋಣ ಎಂದು ಹೇಳಿದರು.

ಕಾಪು ಬಿಜೆಪಿ ಚಾಣಕ್ಯ : ಗಂಗಾಧರ್ ಸುವರ್ಣ

ಕಾಪು ಬಿಜೆಪಿಯ ಐತಿಹಾಸಿಕ ಗೆಲುವಿನ‌ ಹಿಂದೆ ಕಾರ್ಯಕರ್ತರ ಜತೆ ಹಗಲಿರುಲು ಶ್ರಮಿಸಿ ,ಬಿಜೆಪಿಯನ್ನ ಗದ್ದುಗೆ ಏರಿಸಲು ಪ್ರಯತ್ನಸಿ ಯಶಸ್ವಿಯಾದ ಚುನಾವಣ ಏಜೆಂಟ್ ಗಂಗಾಧರ್ ಸುವರ್ಣ ಕಾರ್ಯವನ್ನು ಶ್ಲಾಘಿಸಿ ಕಾಪು ಬಿಜೆಪಿ ಪಕ್ಷದ ಹಿರಿಯರು ಚಾಣಕ್ಯನೆಂದು ಗುರುತಿಸಿದ್ದು ಕಂಡು ಬಂತು.

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಚುನಾವಣಾ ಏಜಂಟ್ ಗಂಗಾಧರ ಸುವರ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್, ಪಕ್ಷದ ಪ್ರಮುಖರಾದ ನಯನಾ ಗಣೇಶ್, ವಿಜಯ ಕುಮಾರ್ ಉದ್ಯಾವರ, ಜಿತೇಂದ್ರ ಶೆಟ್ಟಿ, ಪ್ರವೀಣ್ ಕುಮಾರ್, ಕೇಸರಿ ಯುವರಾಜ್ ಮೊದಲಾದವರು ಉಪಸ್ಥಿತರಿದ್ದರು.