ಕಾಪು : ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ – vishwanews24
ಕಾಪು : ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ
ಗಾಳಿ ಮಳೆಗೆ ಕಾಪು ಪುರಸಭಾ ವ್ಯಾಪ್ತಿಯ ಪೊಲಿಪು ವಾರ್ಡಿನ ಹೀರಾ ಆರ್ ಮೆಂಡನ್ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಉಂಟಾಗಿದ್ದು, ದಿ. 30ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರು ಸ್ಥಳದಲ್ಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಗರಿಷ್ಠ ಪರಿಹಾರ ನೀಡುವಂತೆ ಸೂಚಿಸಿದರು.
ವಯನಾಡ್ ದುರಂತ: ಸಂತ್ರಸ್ತರ ನೆರವಿಗೆ ಮಲಬಾರ್ ಗ್ರೂಪ್ 3 ಕೋಟಿ ರೂ. ನೆರವು – vishwanews24
ಈ ಸಂದರ್ಭದಲ್ಲಿ ಕಾಪು ಪುರಸಭೆಯ ಸದಸ್ಯರಾದ ರಾಧಿಕಾ, ಪೊಲಿಪು ಮೋಗವೀರ ಮಹಾಸಭಾ ಅಧ್ಯಕ್ಷರಾದ ಶ್ರೀಧರ್ ಕಾಂಚನ್, ಕಾಪು ಪುರಸಭೆಯ ಮಾಜಿ ಸದಸ್ಯರಾದ ವಿಜಯ್ ಕರ್ಕೇರ, ಸ್ಥಳೀಯರಾದ ಸುಂದರ್ ಸುವರ್ಣ ಅಜಿತ್ ಮೆಂಡನ್ ಉಪಸ್ಥಿತರಿದ್ದರು.
