ಕಾಪು : ಜೂನ್ 13ರಂದು ಜೆ.ಸಿ ಭವನದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆಗಾಗಿ ತಪಾಸಣಾ ಶಿಬಿರ – Vishwanews24

Featured, ಉಡುಪಿ

ಕಾಪು : ಜೂನ್ 13ರಂದು ಜೆ.ಸಿ ಭವನದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆಗಾಗಿ ತಪಾಸಣಾ ಶಿಬಿರ – Vishwanews24

 ಉಡುಪಿ: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಯಲದ ಎ.ಡಿ.ಐ.ಪಿ ಯೋಜನೆಯಡಿ ಬೆಂಗಳೂರು ಅಲಿಮ್ಕೋ ಎ.ಸಿ.ಸಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ವ್ಯಾಪ್ತಿಯ ವಿಕಲಚೇತನರಿಗೆ ದೈನಂದಿನ ಚಟುವಟಿಕೆಗಳಿಗೆ ಪೂರಕವಾದ ಸಾಧನ ಸಲಕರಣೆಯನ್ನು ವಿತರಿಸಲು ಜೂನ್ 13 ರಿಂದ 23 ರ ವರೆಗೆ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಕಾಪು ಪುರಸಭೆ ವ್ಯಾಪ್ತಿಯ ಜೆ.ಸಿ ಭವನ ಕಾಪು ಇಲ್ಲಿ ದಿನಾಂಕ:13/06/2022 ರಂದು ಅಲಿಮ್ಕೋ ಆಫ್ ಇಂಡಿಯಾ ರವರ ವತಿಯಿಂದ ಉಡುಪಿ ಜಿಲ್ಲಾ ವ್ಯಾಪ್ತಿಯ ವಿಶೇಷ ಚೇತನರಿಗೆ ADIP ಯೋಜನೆಯಡಿಯಲ್ಲಿ ಸಾಧನ ಸಲಕರಣೆ ವಿತರಣೆಗಾಗಿ ಪೂರ್ವಭಾವಿ ತಪಾಸಣಾ ಶಿಭಿರವನ್ನು ಕಾಪು ಪುರಸಭೆ ಸಹಯೋಗದೊಂದಿಗೆ ಆಯೋಜಿಸಲಾಗಿದೆ.

ಸ್ವಯಂ ರಕ್ಷಣೆಗಾಗಿ ಎಲ್ಲ ಹಿಂದೂಗಳಿಗೆ ಬಂದೂಕು ಪರವಾನಗಿ ನೀಡಬೇಕು : ಪ್ರಮೋದ ಮುತಾಲಿಕ್ – Vishwanews24

Leave a Reply