ಕಾಪು : ಡಿ.12ರಂದು ಸಮಾಜರತ್ನ ದಿ| ಲೀಲಾಧರ ಶೆಟ್ಟಿ ಮತ್ತು ದಿ.ವಸುಂಧರಾ ದ್ವಿತೀಯ ವರ್ಷದ ಪುಣ್ಯಸ್ಮರಣೆ ; ಬೃಹತ್ ರಕ್ತದಾನ ಶಿಬಿರ – vishwanews24
ಕಾಪು : ಡಿ.12ರಂದು ಸಮಾಜರತ್ನ ದಿ| ಲೀಲಾಧರ ಶೆಟ್ಟಿ ಮತ್ತು ದಿ.ವಸುಂಧರಾ ದ್ವಿತೀಯ ವರ್ಷದ ಪುಣ್ಯಸ್ಮರಣೆ ..
ಬೃಹತ್ ರಕ್ತದಾನ ಶಿಬಿರ..
ವಿದ್ಯಾರ್ಥಿಗಳಿಗೆ, ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ
ಕಾಪು :ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಹಾಗೂ ಸರ್ವ ಧರ್ಮದ ಬಂಧುಗಳ ಸಹಕಾರದೊಂದಿಗೆ ಸಮಾಜ ರತ್ನ ಕೆ.ದಿ.ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ದಿ.ವಸುಂದರಾ ಶೆಟ್ಟಿ ಅವರ ದ್ವಿತೀಯ ವರ್ಷದ ಸಂಸ್ಮರಣೆಯೊಂದಿಗೆ ಡಿ.12 ರಂದು ಮಜೂರು ಸರ್ಕಲ್ ಬಳಿಯ ಲೀಲಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಕಾಪು ಶ್ರೀ ವೀರಭದ್ರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಲೀಲಣ್ಣ ಹೆಸರಿನಲ್ಲಿ ಪೂಜೆ ನಂತರ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಬ್ರಹತ್ ರಕ್ತದಾನ ಶಿಬಿರ, ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, SSLC ಪರೀಕ್ಷೆ ಯಲ್ಲಿ 2024-2025 ಸಾಲಿನಲ್ಲಿ (ಅನುದಾನಿತ ಶಾಲೆ ) ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ನಗದಿ ನೊಂದಿಗೆ ಸನ್ಮಾನ, ವಿದ್ಯಾರ್ಥಿ ವೇತನ ಹಾಗೂ 3 ಮಂದಿ ಮಾಜಿ ಸೈನಿಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಸಮಾಜ ರತ್ನ ಕೆ. ಲೀಲಾಧರ ಶೆಟ್ಟಿ ಅಭಿಮಾನಿ ಬಳಗ ಕಾಪು ಇವರ ಪ್ರಕಟಣೆಯು ತಿಳಿಸಿದೆ.
ಮಹಿಳಾ ನೌಕರರಿಗೆ ಋತುಚಕ್ರ ರಜೆ : ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ – vishwanews24
