ಕಾಪು ದಿವಾಕರ ಶೆಟ್ಟಿ ವತಿಯಿಂದ 600 ಕುಟುಂಬಗಳಿಗೆ ಅಕ್ಕಿ ಸಹಿತ ಪಡಿತರ ಕಿಟ್ ವಿತರಣೆ.video news – vishwanews24
ಕಾಪು ದಿವಾಕರ ಶೆಟ್ಟಿ ವತಿಯಿಂದ 600 ಕುಟುಂಬಗಳಿಗೆ ಅಕ್ಕಿ ಸಹಿತ ಪಡಿತರ ಕಿಟ್ ವಿತರಣೆ.
ಕಾಪು ; ಕರ್ನಾಟಕ ಹಾಲು ಮಹಾಮಂಡಲದ ನಿರ್ದೇಶಕ ಕಾಪು ಸಿಎ ಬ್ಯಾಂಕ್ನ ಅಧ್ಯಕ್ಷರಾದ ಕಾಪು ದಿವಾಕರ್ ಶೆಟ್ಟಿಯವರ ವೈಯಕ್ತಿಕ ವತಿಯಿಂದ ಲಾಕ್-ಡೌನ್ ಸಮಸ್ಯೆಯಿಂದ ಸಂತ್ರಸ್ತರಾದ ಸುಮಾರು 600 ಕುಟುಂಬಗಳಿಗೆ ಅಕ್ಕಿ ಸಹಿತ ಪಡಿತರ ಕಿಟ್ ವಿತರಿಸಿದರು.
ಕಾಪು, ಉಳಿಯಾರಗೋಳಿ, ಪಾಂಗಾಳ,ಕೋತಲಕಟ್ಟೆ ಭಾಗದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹಾಗೂ ಕಾಪು ಲಕ್ಷ್ಮೀ ಜನಾರ್ದನ ಮತ್ತು ಮೂರನೇ ಮಾರಿಯಮ್ಮ ದೇಗುಲದ ಸಿಬ್ಬಂಧಿಗಳು ಸೇರಿದಂತೆ 600 ಕಿಟ್ ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ಮಾತಾಡಿ ನನಗೆ ನನ್ನ ಗ್ರಾಮದ ಋಣ ಇದೆ ಎರಡು ಬಾರಿ ಗ್ರಾಮ ಪಂಚಾಯತ್ ಅಧ್ಯಕ್ಷನಾದಗ ಮತ್ತು ಪ್ರಸ್ತುತ ಈಗಾಲೂ ಕೂಡ ನನ್ನ ಜತೆ ನಿಂತವರ ಕಷ್ಟದಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ ಹಾಗಾಗಿ ಲಾಕ್ಡೌನ್ ಸಂಕಷ್ಟದ ಸಮಯದಲ್ಲಿ ಅಕ್ಕಿ ಸಹಿತ ಕಿಟ್ ವಿತರಣೆ ಮಾಡುವ ಕಾರ್ಯ ಮಾಡಿದ್ದೇನೆ. ನನ್ನ ಗ್ರಾಮದ ಜನರೆಲ್ಲರೂ ನನ್ನ ಕುಟುಂಬದ ಸದಸ್ಯರಿದ್ದಂತೆ ಎಂದರು. ಕಿಟ್ ಸ್ವೀಕರಿಸಿದ ಗ್ರಾಮಸ್ಥರು ದಿವಾಕರ್ ಶೆಟ್ಟಿವಯರಿಗೆ ಕೃತಜ್ಞತೆ ಸಲ್ಲಿಸಿದರು.
facebook video link
