ಕಾಪು : ನಿಲ್ಲಿಸಿದ್ದ ಲಾರಿಯಿಂದ ಡೀಸೆಲ್‌ ಕಳವು  – Vishwanews24

Featured, ಉಡುಪಿ

ಕಾಪು : ನಿಲ್ಲಿಸಿದ್ದ  ಲಾರಿಯಿಂದ ಡೀಸೆಲ್‌ ಕಳವು  – Vishwanews24

ಕಾಪು : ನಿಲ್ಲಿಸಿದ್ದ ಲಾರಿಯಿಂದ ಡೀಸೆಲ್‌ ಕಳವು ಮಾಡಿರುವ ಘಟನೆ ಕೊಪ್ಪಲಂಗಡಿ ಸಮೀಪ ನಡೆದಿದೆ.

ಈ ಬಗ್ಗೆ ರಾಯಚೂರಿನ ಹನುಮೇಶ ಎಂಬವರು ದೂರು ನೀಡಿದ್ದು ಅದರಂತೆ ಜೂ 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಲಾರಿ ಹಾಗೂ ತನ್ನ ಇತರ ಸ್ನೇಹಿತರಾದ ಮಾರುತಿ, ಮರಿಯಪ್ಪ, ಆದೇಶ ಎಂಬವರ 3 ಟಿಪ್ಪರ್ ಲಾರಿಯನ್ನು ಕೊಪ್ಪಲಂಗಡಿ ಮಸೀದಿ ಸಮೀಪ ಇಟ್ಟು ರಾತ್ರಿ ಮನೆಯಲ್ಲಿ ಮಲಗಿದ್ದರು.

ಮರುದಿನ ಜೂ.9 ರಂದು ಬೆಳಿಗ್ಗೆ 6 ಗಂಟೆಗೆ ನಾಲ್ವರು ಲಾರಿಯ ಡೀಸೆಲ್ ಟ್ಯಾಂಕ್ ಪರಿಶೀಲಿಸಿದಾಗ ನಾಲ್ಕು ಲಾರಿಯಲ್ಲಿ ಡೀಸೆಲ್ ಇಲ್ಲದಿರುವುದು ಕಂಡು ಬಂದಿದೆ. ಹಾಗೂ ಈ ನಾಲ್ಕು ಲಾರಿಯಲ್ಲಿದ್ದ ಅಂದಾಜು ಸುಮಾರು 9000 ರೂ ಮೌಲ್ಯದ 100 ಲೀಟರ್ ಡೀಸೆಲ್ ಕಳವಾಗಿದೆ. ಅದರಂತೆ ಜೂ.8 ರ ರಾತ್ರಿ ಯಾರೋ ಕಳ್ಳರೂ ನಿಲ್ಲಿಸಿದ ನಾಲ್ಕು ಲಾರಿಗಳ ಡೀಸೆಲ್ ಟ್ಯಾಂಕ್ ನಿಂದ ಸುಮಾರು 100 ಲೀಟರ್ ಡೀಸೆಲ್ ಕಳವು ಮಾಡಿಕೊಂಡು ಹೋಗಿರುವುದಾಗಿ ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.