ಕಾಪು ಪಿಲಿಪರ್ಬಕ್ಕೆ ಕ್ಷಣ ಗಣನೆ :ಅಂತಿಮ ತಯಾರಿಗೊಂಡ ಹುಲಿಗಳ ವೇದಿಕೆ : vishwanews24
ಕಾಪು ಪಿಲಿಪರ್ಬಕ್ಕೆ ಕ್ಷಣ ಗಣನೆ :ಅಂತಿಮ ತಯಾರಿಗೊಂಡ ಹುಲಿಗಳ ವೇದಿಕೆ : vishwanews24
ಕಾಂತರ ಖ್ಯಾತಿಯ ನಟ ನಿರ್ದೆಶಕ ರಿಷಭ್ ಶೆಟ್ಟಿ, ಅರ್ಜುನ್ ಕಾಪಿಕಾಡ್ ಉಪಸ್ಥಿತಿ
ರಕ್ಷಣಾಪುರ ಜವನೆರ್ನ ಕೂಟ ಕಾಪು ಇವರಿಂದ ಆಯೋಜನೆ
ಕಾಪು : ರಕ್ಷಣಾಪುರ ಜವನೆರ್ ಕಾಪು ಇವರ ಸಾರಥ್ಯದಲ್ಲಿ ಕಾಪು ಪಿಲಿ ಪರ್ಬ ಹುಲಿ ವೇಷ ಕುಣಿತ ಸ್ಪರ್ಧೆ ಅಕ್ಟೋಬರ್ 11 ರಂದು ಮಧ್ಯಾಹ್ನ 3.30 ಗಂಟೆಗೆ ಕಾಪುವಿನ ಬಂಟರ ಸಂಘದ ಆವರಣದಲ್ಲಿ ನಡೆಯಲು ಅಂತಿಮ ಸಿದ್ದತೆ ಪೂರ್ಣಗೊಂಡಿದೆ.
ದಸರಾ ಹಬ್ಬದ ಪ್ರಯುಕ್ತ ರಾಜಕೀಯ ರಹಿತವಾಗಿ “ಕಾಪು ಪಿಲಿ ಪರ್ಬ -೦೨ ” ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ಗೌರವಧ್ಯಕ್ಷತೆಯಲ್ಲಿ ಊರು ಪರವೂರಿನ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ಝಿ ಕನ್ನಡ ಡ್ರಾಮ ಜೂನಿಯರ್ಸ್ ಸೀಜನ್ 4 ವಿಜೇತೆ ಸಮೃದ್ಧಿ ಮೊಗವೀರ ತಂಡದವರಿಂದ ಯಕ್ಷ ನೃತ್ಯ ರೂಪಕ,ಕಿನ್ನಿಗೊಳಿ ಕ್ರೀವ್ಸ್ ಇನ್ ಕ್ರಿವ್ ಸ್ಟುಡಿಯೋ ಡ್ಯಾನ್ಸ್ ತಂಡದಿಂದ ನೃತ್ಯ ವೈಭವ ,ಕುಣಿತ ಭಜನೆ ನಡೆಯಲಿದ್ದು ಕಾರ್ಯಕ್ರಮದ ಅಂತಿಮ ತಯಾರಿ ಪೂರ್ಣಗೊಂಡಿದೆ.
ಕಾರ್ಯಕ್ರಮದಲ್ಲಿ ಕಾಂತರ ಖ್ಯಾತಿಯ ನಟ ನಿರ್ದೆಶಕ ರಿಷಭ್ ಶೆಟ್ಟಿ ಸೇರಿದಂತೆ ಕೋಸ್ಟಲ್ ವುಡ್ ನಟನಟಿಯರು ಭಾಗವಹಿಸಲಿದ್ದಾರೆ.
