ಕಾಪು ಪೇಟೆಯಲ್ಲಿ ಇಂದು ಸಂಜೆ ಮಾಜಿ ಐಪಿಎಸ್ ಪೊಲೀಸ್ ಅಧಿಕಾರಿ ಅಣ್ಣಾಮಲೈರಿಂದ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ : Vishwanews24
ಕಾಪು: ಕಾಪು ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯ ಅಧ್ಯಕ್ಷರಾದ ಅಣ್ಣಾಮಲೈ ಅವರು ಇಂದು ಸಂಜೆ 7 ಗಂಟೆಗೆ ಕಾಪು ಬಿಜೆಪಿ ಕಚೇರಿಗೆ ಭೇಟಿ ನೀಡಿ ತದನಂತರ ಕಾಪು ಪೇಟೆಯಿಂದ ಜನಾರ್ದನ ದೇವಸ್ಥಾನದ ವರೆಗೆ ಅಭ್ಯರ್ಥಿಗಳ ಪರವಾಗಿ ಮತಯಾಚನೆಯ ರೋಡ್ ಶೋ ನಡೆಸಲಿರುವರು ಎಂದು ಬಿಜೆಪಿಯ ಪತ್ರಿಕಾ ಪ್ರಕಟನೆ ತಿಳಿಸಿದೆ.