ಕಾಪು :  ಬಿಜೆಪಿ ಕಚೇರಿಯಲ್ಲಿ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ – vishwanews24

Featured, ಉಡುಪಿ

ಕಾಪು :  ಬಿಜೆಪಿ ಕಚೇರಿಯಲ್ಲಿ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ

ಕಾಪು: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ‌ ಮಂಗಳವಾರ ಕಾಪು ಕ್ಷೇತ್ರ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಪಕ್ಷದ ವತಿಯಿಂದ ಅಭಿನಂದನೆ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ಕಾರ್ಯಕರ್ತರು, ಮುಖಂಡರ ಪರಿಶ್ರಮ ಮತ್ತು ಎಲ್ಲರ ಸಹಕಾರ, ಪ್ರಯತ್ನದ ಫಲವಾಗಿ ಬಿಜೆಪಿ ಗೆದ್ದಿದೆ.

ನಮ್ಮ ಶಾಸಕರುಗಳು ಇರುವಲ್ಲಿ, ಇಲ್ಲದೇ ಇರುವಲ್ಲಿಯೂ ಬಿಜೆಪಿಗೆ ಬಹುಮತ ದೊರಕಿದೆ. ರಾಜ್ಯದಲ್ಲಿ ಮೋದಿ ಶಕ್ತಿ, ಪಕ್ಷ ಸಂಘಟನೆ ಗೆದ್ದಿದೆ. ಮೋದಿ ಗ್ಯಾರಂಟಿಗೆ ಗೆಲುವಾಗಿದೆ, ಕಾಂಗ್ರೆಸ್ ಗ್ಯಾರಂಟಿ ಗೆ ಸೋಲಾಗಿದೆ ಎಂದರು

Leave a Reply