ಕಾಪು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಏಜೆಂಟ್ಗಳ ರೀತಿ ವರ್ತಿಸುತ್ತಿರುವ ರಾಜ್ಯಪಾಲರ ನಡೆ ಖಂಡನೀಯ : ರೋಯ್ಸ್ ಉದ್ಯಾವರ – vishwanews24
ಕಾಪು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಏಜೆಂಟ್ಗಳ ರೀತಿ ವರ್ತಿಸುತ್ತಿರುವ ರಾಜ್ಯಪಾಲರ ನಡೆ ಖಂಡನೀಯ : ರೋಯ್ಸ್ ಉದ್ಯಾವರ
ಕಾಪು: ಗ್ಯಾರಂಟಿ ಯೋಜನೆ ರೂಪಿಸಿ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದ ಕನ್ನಡ ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳ ವಿರುದ್ಧ ಪಿತೂರಿ ನಡೆಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಏಜೆಂಟ್ಗಳ ರೀತಿ ವರ್ತಿಸುತ್ತಿರುವ ರಾಜ್ಯಪಾಲರ ನಡೆ ಖಂಡನೀಯ ಎಂದು ರಾಜ್ಯ ಕಾಂಗ್ರೆಸ್ ಕಿಸಾನ್ ಕಾರ್ಯದರ್ಶಿ ರೋಯ್ಸ್ ಉದ್ಯಾವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾವೂದೇ ಭ್ರಷ್ಟಾಚಾರ ಮಾಡದ, ಬಡವರ ಹಾಗೂ ಹಿಂದುಳಿದವರ ಪರ ಸದಾ ಬೆಂಬಲವಾಗಿ ನಿಂತಿರುವ, ಸಮಾಜದಲ್ಲಿ ಕಟ್ಟಕಡೆಯ ಮನುಜನೂ ಮುಖ್ಯವಾಹಿನಿಯಲ್ಲಿರಬೇಕು ಎಂದು ಸರ್ಕಾರದಲ್ಲಿ ಆನೇಕ ಯೋಜನೆಗಳನ್ನು ಜಾರಿಗೊಳಿಸಿದ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯನರ ತೇಜೋವಧೆಗೆ ಯತ್ನಿಸುತ್ತಿರುವ ಬಡವರ ವಿರೋಧಿ ಪಕ್ಷವಾದ ಬಿಜೆಪಿ ಹಾಗೂ ಅಧಿಕಾರಕ್ಕಾಗಿ ಯಾರದೂ ಬೂಟು ನೆಕ್ಕುವ ಜೆಡಿಎಸ್ ಪಕ್ಷದ ಪರವಾಗಿ ರಾಜ್ಯಪಾಲರು ನಿಂತರೆ ಅವರಿಗೆ ಗೃಹಲಕ್ಷ್ಮಿ ಫಲಾನುಭವಿಗಳ ಹಾಗೂ ವಿಶೇಷವಾಗಿ ಗ್ಯಾರಂಟಿ ಫಲಾನುಭವಿಗಳ ಶಾಪ ತಟ್ಟಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುಖಾಸುಮ್ಮನೆ ಬಹುಮತದ ಸರ್ಕಾರವನ್ನು ಬುಡಮೇಲು ಮಾಡುವುದು ಹಾಗೂ ಬಡವರ ಮತ್ತು ಮಧ್ಯಮವರ್ಗದವರ ಆರ್ಥಿಕ ಬೆಳವಣಿಗೆ ನಿಲ್ಲುಸುವುದೇ ಇದರ ಹಿಂದಿನ ಅಜೆಂಡಾ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
