ಕಾಪು ಬಿಲ್ಲವರ ಸಂಘದ ನೂತನ ಶ್ರೀ ನಾರಾಯಣ ಗುರು ಜ್ಞಾನ ಮಂದಿರಕ್ಕೆ ನಾಳೆ ಶಿಲನ್ಯಾಸ : vishwanews24
ಕಾಪು ಬಿಲ್ಲವರ ಸಂಘದ ನೂತನ ಶ್ರೀ ನಾರಾಯಣ ಗುರು ಜ್ಞಾನ ಮಂದಿರಕ್ಕೆ ನಾಳೆ ಶಿಲನ್ಯಾಸ : vishwanews24
ಕಾಪು: ಕಾಪು ಬಿಲ್ಲವರ ಸಹಾಯಕ ಸಂಘದ ನೂತನ ಶ್ರೀ ನಾರಾಯಣ ಗುರು ಜ್ಞಾನ ಮಂದಿರದ ಶಿಲನ್ಯಾಸವು ಜುಲೈ 3 ರಂದು ಆದಿತ್ಯವಾರ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜರಗಲಿದೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶಿಲನ್ಯಾಸ ನೇರವೇರಿಸಲಿದ್ದು ,ಸಂಘದ ಅಧ್ಯಕ್ಷ ವಿಕ್ರಂ ಕಾಪು ಅಧ್ಯಕ್ಷತೆ ವಹಿಸಲಿದ್ದಾರೆ.
ಸಚಿವ ಸುನಿಲ್ ಕುಮಾರ್,ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಮನಾಥ ಕೋಟ್ಯಾನ್,ಮಾಜಿ ಸಚಿವ ವಿನಯ ಕುಮಾರ್ ಸೊರಕೆ,ಗಣ್ಯರಾದ ರಾಜಶೇಖರ ಕೋಟ್ಯಾನ್, ಹರೀಶ್ ಜಿ ಅಮೀನ್,ಎಚ್.ಎಸ್.ಸಾಯಿರಾಮ್,ಬಿ.ಎನ್ ಶಂಕರ ಪೂಜಾರಿ, ಗೋವಿಂದ ಬಾಬು ಪೂಜಾರಿ, ಪ್ರಭಾಕರ ಪೂಜಾರಿ, ಚರಣ್ ಶಾಂತಿ ಭಾಗವಹಿಸಲಿದ್ದಾರೆ.



