ಕಾಪು: ಬೆಳಪು, ಪುಂಚಲಕಾಡು ಪರಿಸರದಲ್ಲಿ ನಿತ್ಯ ಸಂಚಾರಕ್ಕೆ ನರ್ಮ್ ಬಸ್ ಪ್ರಾಂಭಿಸಲು ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ – Vishwanews24

Featured, ಉಡುಪಿ

ಕಾಪು: ಬೆಳಪು, ಪುಂಚಲಕಾಡು ಪರಿಸರದಲ್ಲಿ ನಿತ್ಯ ಸಂಚಾರಕ್ಕೆ ನರ್ಮ್ ಬಸ್ ಪ್ರಾಂಭಿಸಲು ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ – Vishwanews24

ಕಾಪು: ತಾಲೂಕಿನ ಬೆಳಪು, ಪುಂಚಲಕಾಡು ಪರಿಸರದಲ್ಲಿ ನಿತ್ಯ ಸಂಚಾರಕ್ಕೆ ನರ್ಮ್ ಬಸ್ ಗಳ ವ್ಯವಸ್ಥೆ ಮಾಡಿಕೊಡುವಂತೆ ಈ ಪರಿಸರದ ಜನರು ರಾಜ್ಯ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಭಾಗದಲ್ಲಿ ಈಗಾಗಲೇ ಖಾಸಗಿ ಬಸ್ ಗಳ ಓಡಾಟವಿದ್ದು ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಹಾಗೂ ಪ್ರತಿ ದಿನ ಕೂಲಿ ಕೆಲಸಕ್ಕೆ ಹಾಗೂ ಇತರೆ ಕೆಲಸಕ್ಕೆ ಹೋಗುವ ಸ್ಥಳೀಯರು ಮತ್ತು ಸಾರ್ವಜನಿಕರು ಸೇರಿ ಸಾವಿರಕ್ಕೂ ಹೆಚ್ಚು ಜನರು ಬಸ್ಸನ್ನೇ ಅಬಲಂಭಿಸಿದ್ದಾರೆ. ಆದರೆ ಅನೇಕ ಸಂದರ್ಭದಲ್ಲಿ ಖಾಸಗಿ ಬಸ್ ಗಳ ಮುಸ್ಕರ, ಬಂದ್ ಇತ್ಯಾದಿಗಳಿಂದಾಗಿ ಈ ಭಾಗದ ಸ್ಥಳೀಯರ ನಿತ್ಯ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಈ ಭಾಗದಲ್ಲಿ ಸಾರ್ವಜನಿಕರ ನೆರವಿಗೆ ನರ್ಮ್ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿಗಳು ಬೇಡಿಕೆ ಇಟ್ಟಿದ್ದಾರೆ.

ಈ ಹಿಂದೆ ಎರಡು ನರ್ಮ್ ಬಸ್ಸುಗಳು ಇದೇ ಮಾರ್ಗದ ಮೂಲಕ ಆನೆಗುಂದಿ ಮಠದವರೆಗೆ ಸಂಚಾರ ನಡೆಸುತ್ತಿದ್ದವು, ಆದರೆ ಈ ಭಾಗದ ಖಾಸಗಿ ಬಸ್ ಮಾಲಕರ ಒತ್ತಡಕ್ಕೆ ಮಣಿದು ಸರಕಾರಿ ಬಸ್ಸನ್ನು ಸ್ಥಗಿತಗೊಳಿಸಿದ್ದಾರೆ. ಸದ್ಯ ಈ ಭಾಗಕ್ಕೆ ನರ್ಮ್ ಬಸ್ ಸೇವೆಯ ಅಗತ್ಯ ವಿದ್ದು ಸರಕಾರಿ ನರ್ಮ್ ಬಸ್ಸಿನ ಸೇವೆಯನ್ನು ಪುನರ್ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಲಾಗಿದೆ.

ಮಾರ್ಚ್ 25ರಂದು ಯೋಗಿ ಆದಿತ್ಯನಾಥ್  ಪ್ರಮಾಣ ವಚನ ಸ್ವೀಕಾರ – Vishwanews24

Leave a Reply