ಕಾಪು: ಬ್ಯಾಂಕ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಲಿಂಕ್ ; ಖಾತೆಯಿಂದ 82,200 ರೂ. ವಂಚನೆ – vishwanews24
ಕಾಪು: ಬ್ಯಾಂಕ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಲಿಂಕ್ಗೆ ಕ್ಲಿಕ್ ; ಖಾತೆಯಿಂದ 82,200 ರೂ. ವಂಚನೆ
ಕಾಪು: ಐದು ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವ ಭಾಸ್ಕರ್ ಎಂಬವರರು ತಮ್ಮ ಮೊಬೈಲ್ಗೆ ಬಂದ ಲಿಂಕ್ನ್ನು ಕ್ಲಿಕ್ ಮಾಡಿ 82,200 ರೂಪಾಯಿ ವಂಚನೆಗೊಳಗಾದ ಘಟನೆ ಕಾಪುವಿನಲ್ಲಿ ನಡೆದಿದೆ.
ಭಾಸ್ಕರ್ ಅವರ ಮೊಬೈಲ್ಗೆ ಮೇ 22ರಂದು ಕೆನರಾ ಬ್ಯಾಂಕ್ ಹೆಸರಿನಲ್ಲಿ ಬಂದಿದ್ದ ಲಿಂಕ್ನ್ನು ಕ್ಲಿಕ್ ಮಾಡಿದ ಪರಿಣಾಮ ಕೆನರಾ ಬ್ಯಾಂಕ್ನ 5 ಖಾತೆಗಳಲ್ಲಿದ್ದ 82,200 ರೂಪಾಯಿ ಕಡಿತವಾದ ಬಗ್ಗೆ ಮೆಸೇಜ್ ಬಂದಿತ್ತು. ಬಳಿಕ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಖಾತೆಯಲ್ಲಿ ಹಣ ಕಡಿತವಾಗಿರುವ ಬಗ್ಗೆ ಮಾಹಿತಿ ಖಚಿತವಾಗಿದ್ದು ಯಾರೋ ಸೈಬರ್ ವಂಚಕರು ವಾಟ್ಸಾಪ್ಗೆ ನಕಲಿ ಲಿಂಕ್ ಕಳುಹಿಸಿ ಈ ಕೃತ್ಯ ವೆಸಗಿರುವುದಾಗಿ ತಿಳಿದು ಬಂದಿದೆ.
ವಿನಯ್ ಕುಮಾರ್ ಸೊರಕೆಯವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಮೆಲ್ವಿನ್ ಡಿಸೋಜ ಆಗ್ರಹ – vishwanews24
ಈ ಬಗ್ಗೆ ವಂಚನೆಗೊಳಗಾದ ಭಾಸ್ಕರ್ ಅವರು 1930 ಗೆ ಕರೆ ಮಾಡಿ ದೂರು ನೀಡಿದ್ದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
